ಸೇನೆಯ ಸೇವೆಯಿಂದ ನಿವೃತ್ತನಾಗಿ ಬಂದ ಯೋಧನಿಗೆ ಕೊಪ್ಪಳದ ಸ್ವಗ್ರಾಮದಲ್ಲಿ ಭಾರೀ ಸನ್ಮಾನ, ಸತ್ಕಾರ

Updated on: Jul 07, 2025 | 12:45 PM

ಬಸ್ಸಾಪುರದಲ್ಲಿ ರಂಗಪ್ಪನವರ ಮೆರವಣಿಗೆ ಸಾಗುತ್ತಿರುವ ರಸ್ತೆಯ ಪಕ್ಕದಲ್ಲೇ ಒಂದು ಪ್ರಾಥಮಿಕ ಶಾಲೆಯಿದೆ. ಅಲ್ಲಿ ಓದುವ ಮಕ್ಕಳು ಡೊಳ್ಳು ಮತ್ತು ತಮಟೆ ಬಾರಿಸುವ ಸದ್ದು ಕೇಳಿ ಹೊರಗೋಡಿ ಬಂದು ಕುಣಿಯುತ್ತಾರೆ. ಈ ಶಾಲಾ ಮಕ್ಕಳಿಗೆ ರಂಗಪ್ಪ ಒಂದು ಸ್ಫೂರ್ತಿಯಾಗಲಿದ್ದಾರೆ, ಶಾಲಾಮಕ್ಕಳಿಗೆ ಮಾತ್ರ ಅವರು ಪ್ರೇರಣೆಯೆಂದರೆ ತಪ್ಪಾಗುತ್ತದೆ, ಅವರು ತಮ್ಮ ಜಿಲ್ಲೆ ಮತ್ತು ರಾಜ್ಯದ ಜನತೆಗೂ ಮಾದರಿ.

ಕೊಪ್ಪಳ, ಜುಲೈ 7: ಜಿಲ್ಲೆಯ ಕುಷ್ಟಗಿ ತಾಲೂಕಿನ (Kushtagi taluk) ಬಸಾಪುರ ಚಿಕ್ಕ ಗ್ರಾಮವಾಗಿರಬಹುದು, ಆದರೆ ಇಲ್ಲಿನ ನಿವಾಸಿಗಳ ಹೃದಯ ದೊಡ್ಡದು. ಈ ಊರಿನ ನಿವಾಸಿ ರಂಗಪ್ಪ ವಾಲ್ಮೀಕಿ ಸೇನೆಯಲ್ಲಿ 39-ವರ್ಷ ಸುದೀರ್ಘ ಸೇವೆ ಸಲ್ಲಿಸಿದ ನಂತರ ನಿವೃತ್ತರಾಗಿ ಸ್ವಗ್ರಾಮಕ್ಕೆ ವಾಪಸ್ಸಾಗಿದ್ದಾರೆ. ಅವರನ್ನು ಮತ್ತು ಅವರ ಪತ್ನಿಯನ್ನು ಊರಿನ ಜನ ಡೊಳ್ಳು ಬಾರಿಸುತ್ತಾ, ಕುಣಿಯುತ್ತಾ, ಕೇಕೆ ಹಾಕುತ್ತಾ ಬರಮಾಡಿಕೊಂಡರು. ಮಿಲಿಟರಿ ಸೇವೆ ಎಂದರೆ ಮೂಗು ಮುರಿಯುವ ಜನ ರಂಗಪ್ಪನವರಿಗೆ ಸಿಕ್ಕ ಸನ್ಮಾನವನ್ನು ಒಮ್ಮೆ ನೋಡಬೇಕು. ರಂಗಪ್ಪರಲ್ಲೂ ಸಾರ್ಥಕ ಮತ್ತು ಕೃತಜ್ಞತಾ ಭಾವ ಮೂಡಿರಬಹುದು.

ಇದನ್ನೂ ಓದಿ:  ಅಮರನಾಥ ಯಾತ್ರಿಕರ ರಕ್ಷಣೆಗಾಗಿ ಆಪರೇಷನ್ ಶಿವ ಆರಂಭಿಸಿದ ಭಾರತೀಯ ಸೇನೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ