Scorching heat: ಪಾಟ್ನಾದಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಬಸವಳಿಯುತ್ತಿರುವ ಜನ ತಂಪು ನೀರಿಗಾಗಿ ಮಣ್ಣಿನ ಮಡಕೆಗಳ ಮೊರೆ!
ಕುಂಬಾರ ಸಮುದಾಯವರು ವಿವಿಧ ಅಕಾರ ಮತ್ತು ಗಾತ್ರದ ಮಡಕೆ, ನೀರಿನ ಬಾಟಲಿ ಮತ್ತು ಜಗ್ ಗಳನ್ನು ತಯಾರಿಸಿ ಮಾರುತ್ತಿದ್ದಾರೆ. ನಗರದ ಹಲವಾರು ಕಡೆಗಳಲ್ಲಿ ಕುಂಬಾರ ಸಮುದಾಯದವರು ಮಡಕೆಗಳನ್ನು ಮಾರುತ್ತಿದ್ದಾರೆ.
ಪಾಟ್ನಾ (ಬಿಹಾರ): ಬಿಹಾರ ರಾಜಧಾನಿ ಪಾಟ್ನಾದಲ್ಲಿ ಕಡುಬೇಸಿಗೆಯ ತಾಪಮಾನ (mercury) ಅಸಹನೀಯವಾಗುತ್ತಿದ್ದಂತೆಯೇ ಹೂಜಿ, ಮಣ್ಣಿನ ಮಡಕೆಗಳಿಗೆ (earthen pots) ಭಾರೀ ಬೇಡಿಕೆ ಶುರುವಾಗಿದೆ. ಮಡಕೆಗಳನ್ನು ಕೊಳ್ಳುತ್ತಿರುವವರೆಲ್ಲ ತಮಗೆ ಫ್ರಿಡ್ಜ್ ನೀರಿಗಿಂತ ಮಡಕೆಯಲ್ಲಿ ತುಂಬಿಟ್ಟ ನೀರು (water) ಕುಡಿಯುವುದು ಇಷ್ಟವೆಂದು ಹೇಳುತ್ತಿದ್ದಾರೆ.
‘ಮಡಕೆಯಲ್ಲಿ ನೀರು ನೈಸರ್ಗಿಕವಾಗಿ ತಂಪಾಗುತ್ತದೆ, ಹಾಗಾಗೇ ಜನರೆಲ್ಲ ಮಡಕೆಯಲ್ಲಿನ ನೀರು ಕುಡಿಯಲಿಚ್ಛಿಸುತ್ತಾರೆ. ಮಡಕೆಯಲ್ಲಿ ನಮಗೆ ಸಿಗೋದು ತಂಪಾದ ಶುದ್ಧ ಕುಡಿಯುವ ನೀರು,’ ಅಂತ ಮನು ಕುಮಾರ್ ಹೆಸರಿನ ಪಾಟ್ನಾ ನಿವಾಸಿ ಹೇಳುತ್ತಾರೆ.
ಇದನ್ನೂ ಓದಿ: ಜ್ವರ ಬಂದು ಹೋದಮೇಲೆ ನಿಮ್ಮ ರೋಗನಿರೋಧಕ ಶಕ್ತಿ ಕುಗ್ಗಿದೆಯೇ? ಅರೋಗ್ಯ ಸುಧಾರಣೆಗೆ ಈ ಆಹಾರಗಳನ್ನು ಸೇವಿಸಿ
‘ಮಣ್ಣಿನ ಮಡಕೆ ಮತ್ತು ಸುರಾಹಿಗಳಲ್ಲಿನ (ಹೂಜಿ) ನೀರು ಕುಡಿಯಬೇಕೆಂದು ನಮ್ಮ ಪೂರ್ವಜರು ಹೇಳುತ್ತಿದ್ದರು. ಪಾಟ್ನಾದಲ್ಲಿ ತಾಪಾಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದ್ದು ನಮ್ಮನ್ನು ದಹಿಸುತ್ತಿದೆ. ಈ ಕಾರಣಕ್ಕಾಗೇ ಇದೇ ಮಾರ್ಗವಾಗಿ ಹೊಗುತ್ತಿದ್ದ ನಾನು ಮಡಕೆ ಕೊಳ್ಳಲು ಬಂದಿದ್ದೇನೆ,’ ಎಂದು ಅಮರ್ ನಾಥ್ ಪಾಂಡೆ ಹೆಸರಿನ ಗ್ರಾಹಕ ಹೇಳುತ್ತಾರೆ.
‘ತಾಮಮಾನ ತೀವ್ರವಾಗಿದೆ, ಸೆಕೆ ತಡೆಯಲಾಗುತ್ತಿಲ್ಲ. ಫ್ರಿಡ್ಜ್ ಮತ್ತು ಮಟ್ಕಾದ (ಮಡಕೆ) ನೀರು ಕೊಟ್ಟರೆ ನಾನು ಮಟ್ಕಾದ ನೀರು ಕುಡಿಯಬಯಸುತ್ತೇನೆ. ಮನೆಯಲ್ಲಿ ಪ್ರಿಡ್ಜ್ ಇದ್ಯಾಗ್ಯೂ ನಾನು ಮಟ್ಕಾ ಕೊಳ್ಳಲು ಬಂದಿದ್ದೇನೆ,’ ಎಂದು ಅನುರಾಗ್ ಎನ್ನುವವರು ಹೇಳುತ್ತಾರೆ.
ಇದನ್ನೂ ಓದಿ: 2002 Gujarat Riots: ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣ, ಎಲ್ಲಾ ಆರೋಪಿಗಳ ಬಿಡುಗಡೆಗೆ ಕೋರ್ಟ್ ಆದೇಶ
ಕುಂಬಾರ ಸಮುದಾಯವರು ವಿವಿಧ ಅಕಾರ ಮತ್ತು ಗಾತ್ರದ ಮಡಕೆ, ನೀರಿನ ಬಾಟಲಿ ಮತ್ತು ಜಗ್ ಗಳನ್ನು ತಯಾರಿಸಿ ಮಾರುತ್ತಿದ್ದಾರೆ. ನಗರದ ಹಲವಾರು ಕಡೆಗಳಲ್ಲಿ ಕುಂಬಾರ ಸಮುದಾಯದವರು ಮಡಕೆಗಳನ್ನು ಮಾರುತ್ತಿದ್ದಾರೆ.
‘ಗ್ರಾಹಕರ ಬೇಡಿಕೆಯ ಮೇರೆಗೆ ನಾವು ಮಡಕೆಗಳನ್ನು ತಯಾರಿಸುತ್ತೇವೆ, ಅವರಿಗೆ ಸುಂದರವಾಗಿ ಕಾಣುವ ಉತ್ತಮ ಗುಣಮಟ್ಟದ ಮಡಕೆಗಳು ಬೇಕು,’ ಎಂದು ಮಡಕೆ ವ್ಯಾಪಾರಿ ಮನೋಜ್ ಪಂಡಿತ್ ಹೇಳುತ್ತಾರೆ.
ಗಂಗಾ ನದಿ ತೀರದ ಮಣ್ಣಿನಿಂದ ಮಡಕೆಗಳನ್ನು ತಯಾರಿಸುವುದಾಗಿ ಕುಂಬಾರರು ಹೇಳುತ್ತಾರೆ. ಅವರಲ್ಲಿ ಲಭ್ಯವಿರುವ ಮಡಕೆಗಳ ಬೆಲೆ ರೂ. 150ರಿಂದ ರೂ 500ರವರೆಗೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ