ಯಾರೋ ಕೊಟ್ಟ ಶಾಲು, ಹೂಗುಚ್ಛ ಸಿಎಂಗೆ ಕೊಟ್ಟೆ ಅಷ್ಟೇ: ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ

ಯಾರೋ ಕೊಟ್ಟ ಶಾಲು, ಹೂಗುಚ್ಛ ಸಿಎಂಗೆ ಕೊಟ್ಟೆ ಅಷ್ಟೇ: ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ

Edited By:

Updated on: Nov 28, 2026 | 10:41 PM

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರ ಜೊತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು 2000 ರೂಪಾಯಿ ಗೌರವಧನ ಹೆಚ್ಚಿಸುವುದಾಗಿ ಹೇಳಿ ಸಂಘಟನೆ ಪ್ರತಿನಿಧಿಗಳನ್ನು ಮನವೊಲಿಸಿದ್ದರು. ಆದ್ರೆ, ಫ್ರೀಡಂ ಪಾರ್ಕ್​​ನಲ್ಲಿ ಧರಣಿ ನಿರತ ಕಾರ್ಯಕರ್ತೆಯರು ಮಾತ್ರ ಯಾವುದೇ ಕಾರಣಕ್ಕೂ 2000ರೂ. ಒಪ್ಪುವುದಿಲ್ಲ ಎಂದು ಪಟ್ಟಿ ಹಿಡಿದಿದ್ದಾರೆ. ಹೀಗಾಗಿ ಧರಣಿ ಮುಂದುವರಿಸಲು ಸಹ ತೀರ್ಮಾನಿಸಿದ್ದಾರೆ.

ಬೆಂಗಳೂರು, ನವೆಂಬರ್ 28: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರ ಜೊತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು 2000 ರೂಪಾಯಿ ಗೌರವಧನ ಹೆಚ್ಚಿಸುವುದಾಗಿ ಹೇಳಿ ಸಂಘಟನೆ ಪ್ರತಿನಿಧಿಗಳನ್ನು ಮನವೊಲಿಸಿದ್ದರು. ಆದ್ರೆ, ಫ್ರೀಡಂ ಪಾರ್ಕ್​​ನಲ್ಲಿ ಧರಣಿ ನಿರತ ಕಾರ್ಯಕರ್ತೆಯರು ಮಾತ್ರ ಯಾವುದೇ ಕಾರಣಕ್ಕೂ 2000ರೂ. ಒಪ್ಪುವುದಿಲ್ಲ ಎಂದು ಪಟ್ಟಿ ಹಿಡಿದಿದ್ದಾರೆ. ಹೀಗಾಗಿ ಧರಣಿ ಮುಂದುವರಿಸಲು ಸಹ ತೀರ್ಮಾನಿಸಿದ್ದಾರೆ.

ಇನ್ನು ಈ ಬಗ್ಗೆ ರಾಜ್ಯ ಆಶಾ ಕಾರ್ಯಕರ್ತೆ ಸಂಘದ ಕಾರ್ಯದರ್ಶಿ ನಾಗಲಕ್ಷ್ಮಿ ಪ್ರತಿಕ್ರಿಯಿಸಿ, ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಚರ್ಚೆ ಆಗಿದ್ದು, ನಾವು ಮುಖ್ಯವಾಗಿ ಬೇಡಿಕೆ ಲಿಖಿತವಾಗಿ ಬೇಕು ಎಂದಿದ್ದೇವೆ. ಇದಕ್ಕೆ ಸಿಎಂ ನನ್ನ ಮಾತೆ ಲಿಖಿತ ಅಂತ ಹೇಳಿದ್ರು. ಆದರೆ ಲಿಖಿತವಾಗಿ ಬರೂವರೆಗೂ ಈ ಹೋರಾಟ ಮುಂದುವರಿಕೆ. ಸಿಎಂ ಜೊತೆಗಿನ ಸಭೆಯಲ್ಲಿ ಶಾಲು, ಹೂಗುಚ್ಛ ನಾವು ತಗೊಂಡಿಲ್ಲ. ಸಿಎಂ ಕಚೇರಿಯಲ್ಲಿ ಅವರೇ ಕೊಟ್ರು. ನಾವು ಏನೂ ತಪ್ಪು ಮಾಡಿಲ್ಲ. ಕೆಲವರು ಅಪಪ್ರಚಾರ ಮಾಡ್ತಿದ್ದಾರೆ ಸರ್ಕಾರದ ನಿಲುವುಗಳು ನಿಮಗೆ ಗೊತ್ತಿದೆ. ನಾವು ಹಿಂದೆ ಮೋಸ ಹೋಗಿದ್ದೇವೆ. ನಮಗೆ ಲಿಖಿತವಾಗಿ ಬೇಕು. ಆದೇಶ ಸ್ಪಷ್ಟವಾಗಿ ಕೊಡುವರೆಗೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.

Loading...
Unable to load recommendations.
Follow Us
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More