ಪ್ರತಿಭಟನೆಗಾಗಿ ಮೈಸೂರಿಗೆ ಅಶೋಕ, ಅಶ್ವಥ್ ನಾರಾಯಣ ಗೂಡ್ಸ್ ಅಟೋದಲ್ಲಿ ಬಂದಿದ್ದು ಯಾಕೆ?
ಅಶೋಕ ಮತ್ತು ಆಶ್ವಥ್ ನಾರಾಯಣ ಮೈಸೂರಲ್ಲಿ ಪ್ರತಿಭಟನಾ ಱಲಿ ಶುರುಮಾಡಿದಾಗ ಅವರೊಂದಿಗೆ ಕೇವಲ 8-10 ಜನ ಕಾಣಿಸುತ್ತಾರೆ. ಅದರೆ ಅವರು ಮುಂದೆ ಸಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಜಮಾಯಿಸುತ್ತಾ ಹೋಗುತ್ತಾರೆ. ಸೈಟು ಕಳ್ಳ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಅಂತ ನಾಯಕರು ಕೂಗುವ ಘೋಷಣೆ ಕೇಳಿಸಿಕೊಳ್ಳಬಹುದು.
ಮೈಸೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ಅಕ್ರಮವಾಗಿ 14 ಸೈಟುಗಳನ್ನು ಹಂಚಿರುವ ಅರೋಪಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕೆಂದು ನಗರದಲ್ಲಿ ರಾಜ್ಯ ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕ ಆರ್ ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. ತಾವು ಮೈಸೂರಲ್ಲಿ ಕಂಡಕೂಡಲೇ ಪೊಲೀಸರು ವಶಕ್ಕೆ ಪಡೆಯೋದು ನಿಶ್ಚಿತ ಅಂತ ಮನಗಂಡಿದ್ದ ಅಶೋಕ ಮತ್ತು ಡಾ ಸಿ ಅಶ್ವಥ್ ನಾರಾಯಣ ಮೈಸೂರು ನಗರವನ್ನು ಹೇಗೆ ಪ್ರವೇಶಿಸಿದರು ಅನ್ನೋದು ಕುತೂಹಲಕಾರಿ. ನಿಮಗೆ ದೃಶ್ಯಗಳಲ್ಲಿ ಕಾಣುತ್ತಿರುವ ಹಾಗೆ ಅವರು ಸರಕುಗಳನ್ನು ಸಾಗಿಸುವ ಅಟೋವೊಂದರಲ್ಲಿ ಅಗಮಿಸಿದರು! ಈ ಆಟೋದಲ್ಲಿ ಅವರು ಎಷ್ಟು ದೂರ ಪಯಣಿಸಿದರು ಅಂತ ಗೊತ್ತಾಗಲಿಲ್ಲ. ಬಹಳ ದೂರದಿಂದ ಏನಾದರೂ ಬಂದಿದ್ದರೆ ಮೈ ನುಗ್ಗೆದ್ದರಿತ್ತದೆ ಮತ್ತು ರಾತ್ರಿ ಮಲಗುವಾಗ ಮಾತ್ರೆಯ ಅವಶ್ಯಕತೆ ತಲೆದೋರಲಿದೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುರ್ಚಿ ಉಳಿಸಿಕೊಳ್ಳಲು ವಿಪಕ್ಷಗಳ ಹೋರಾಟ ಹತ್ತಿಕ್ಕುವ ಸರ್ವಾಧಿಕಾರಿ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ