Karnataka Budget Session: ವಿಪಕ್ಷ ಶಾಸಕರು ಮಾತಾಡುವಾಗ ಕೆಮೆರಾ ಯಾಕೆ ಅವರ ಮೇಲೆ ನೆಟ್ಟಿರುವುದಿಲ್ಲ? ಅಶೋಕ
ಸದಸ್ಯರೊಬ್ಬರು ಮಾತಾಡುವಾಗ ಟಿವಿ ಕೆಮೆರಾ ಅವರ ಮೇಲೆ ನೆಟ್ಟಿರಬೇಕು. ವಿಪಕ್ಷದ ಶಾಸಕರು ಮಾತಾಡುವಾಗ ಮುಖ್ಯಮಂತ್ರಿ, ಡಿಸಿಎಂ, ಸಭಾಧ್ಯಕ್ಷ ಇಲ್ಲವೇ ಸದನದ ಇಮೇಜ್ ತೋರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಸರ್ಕಾರ ನಡೆಸುವ ಆಡಳಿತ ಪಕ್ಷವು ಕಲಾಪವನ್ನು ಲೈವ್ ಬಿತ್ತರ ಮಾಡುವ ಸಿಬ್ಬಂದಿಗೆ ಹೆಚ್ಚು ಫೋಕಸ್ ವಿರೋಧ ಪಕ್ಷದ ಶಾಸಕ ಮೇಲೆ ಇಡೋದು ಬೇಡವೆಂದು ಸೂಚನೆ ಕೊಟ್ಟಿರುತ್ತದೆ ಅಂತ ಅರ್ಥ ಮಾಡಿಕೊಳ್ಳಲು ರಾಕೆಟ್ ಸೈನ್ಸ್ ಓದುವ ಅವಶ್ಯಕತೆ ಇಲ್ಲ.
ಬೆಂಗಳೂರು, ಮಾರ್ಚ್ 4: ಮಾಧ್ಯಮ ಗಮನಿಸುತ್ತಿದೆ ಮತ್ತು ರಾಜ್ಯದ ಜನತೆ ಕೂಡ. ಎಲ್ಲ ಟವಿ ಚ್ಯಾನೆಲ್ ಗಳು ನ ಸದನದ ಕಲಾಪವನ್ನು ಲೈವ್ ಆಗಿ ಬಿತ್ತರಿಸುವುದರಿಂದ (live telecast) ಕನ್ನಡಿಗರು ಈ ಸೂಕ್ಷ್ಮವನ್ನು ಗಮನಿಸುದಿರುತ್ತಾರೆಯೇ? ವಿಷಯವೇನೆಂದರೆ, ಸದನದಲ್ಲಿ ವಿರೋಧ ಪಕ್ಷದ ಶಾಸಕರು ಮಾತಾಡುವಾಗ, ವಿಷಯಗಳನ್ನು ಸದನದ ಗಮನಕ್ಕೆ ತರುವಾಗ ಕೆಮೆರಾ ಅವರ ಮೇಲೆ ಫೋಕಸ್ ಆಗಿರಲ್ಲ, ಸದನದ ವಿಹಂಗಮ ವಿಡಿಯೋ ಹೋಗುತ್ತಿರುತ್ತದೆ, ಆಗಾಗ ಸಭಾಧ್ಯಕ್ಷರನ್ನು ಇಲ್ಲವೇ ಮಂತ್ರಿಗಳ ಮುಖಗಳ ತೋರುವ ಕೆಲಸವನ್ನು ಕೆಮೆರಾ ಮಾಡುತ್ತದೆ. ವಿರೋಧ ಪಕ್ಷದ ಯಾವ ಶಾಸಕ ಮಾತಾಡುತ್ತಿದ್ದಾರೆ ಅನ್ನೋದು ಗೊತ್ತೇ ಆಗಲ್ಲ. ಇದೇ ವಿಷಯವನ್ನು ವಿಪಕ್ಷ ನಾಯಕ ಅರ್ ಅಶೋಕ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಭಾಧ್ಯಕ್ಷರ ಗಮನಕ್ಕೆ ತಂದು ಇದನ್ನು ಸರಿಪಡಿಸುವಂತೆ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka budget 2025: ಸರ್ಕಾರಕ್ಕೆ ಕನ್ನಡದ ಮೇಲೆ ಅಭಿಮಾನವಿದ್ದರೆ ಶಾಲಾ ಗ್ರಂಥಾಲಯಗಳ ಬಿಲ್ ತಾನೇ ಪಾವತಿಸಲಿ: ಆರ್ ಅಶೋಕ