ಏಷ್ಯಾಕಪ್ ಫೈನಲ್ ರೋಚಕ ಘಟ್ಟ ತಲುಪಿದಾಗ ಭಾರತದ ಡ್ರೆಸಿಂಗ್ ರೂಂ ಹೇಗಿತ್ತು ನೋಡಿ
Asia Cup 2025 BCCI Shares Joy Video: ಟೀಂ ಇಂಡಿಯಾ 2025 ಏಷ್ಯಾಕಪ್ ಗೆದ್ದಿದೆ, ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮೂರು ಪಂದ್ಯಗಳಲ್ಲಿ ಜಯಗಳಿಸಿದರೂ, ಫೈನಲ್ ಮಾತ್ರ ಅತ್ಯಂತ ರೋಚಕವಾಗಿತ್ತು. ಕೊನೆಯ ಓವರ್‌ಗಳಲ್ಲಿ ಗೆಲುವಿಗಾಗಿ ಭಾರತ ಹರಸಾಹಸ ಪಟ್ಟಿತು, ಡ್ರೆಸ್ಸಿಂಗ್ ರೂಂನಲ್ಲಿ ತೀವ್ರ ಆತಂಕವಿತ್ತು. ಅಂತಿಮವಾಗಿ ಗೆದ್ದು ಬೀಗಿದ ಭಾರತ ತಂಡದ ಆ ಸಂಭ್ರಮದ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.
ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸಿ 2025 ರ ಏಷ್ಯಾಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಮೂರು ಪಂದ್ಯಗಳು ನಡೆದವು. ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಏಕಪಕ್ಷೀಯವಾಗಿ ಪಾಕಿಸ್ತಾನವನ್ನು ಸೋಲಿಸಿತ್ತು. ಆದರೆ ಫೈನಲ್ನಲ್ಲಿ ಮಾತ್ರ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಬೇಕಾಯಿತು. 146 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಮುಕ್ತವಾಗಿ ಗುರಿ ಬೆನ್ನಟ್ಟಲು ಪಾಕಿಸ್ತಾನ ಅವಕಾಶ ಮಾಡಿಕೊಡಲಿಲ್ಲ.
ಹೀಗಾಗಿ ಪಂದ್ಯ ರೋಚಕ ಘಟದತ್ತ ಸಾಗಿತು. ಅದರಲ್ಲೂ ಕೊನೆಯ 2 ಓವರ್‌ಗಳಲ್ಲಿ 17 ರನ್ ಬೇಕಾಗಿದ್ದಾಗ, ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಶಿವಂ ದುಬೆ ಅವರ ವಿಕೆಟ್ ಬೇರೆ ಕಳೆದುಕೊಂಡಿತು. ಇದರಿಂದ ಭಾರತದ ಡ್ರೆಸಿಂಗ್ ರೂಮ್ನಲ್ಲಿ ಟೆನ್ಷನ್ ಹೆಚ್ಚಾಗಿತ್ತು. ಎಲ್ಲರ ಮುಖದಲ್ಲೂ ಆತಂಕ ಮನೆ ಮಾಡಿತ್ತು. ಆದಾಗ್ಯೂ ಕೊನೆಯ ಓವರ್ನಲ್ಲಿ ಪಂದ್ಯ ಗೆದ್ದಾಗ ಇಡೀ ಡ್ರೆಸಿಂಗ್ ರೂಮ್ ಹುಚ್ಚೆದ್ದು ಕುಣಿಯಿತು. ಇದೀಗ ಅದರ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

