ಸಂಜನಾ Husband ಪಾಷಾ 5 ದಿನದಿಂದ ಆಸ್ಪತ್ರೆಗೆ ಬಂದಿಲ್ಲ, ವೈಯಕ್ತಿಕ ಕಾರಣ ನೀಡಿ ರಜೆ!

ಸಂಜನಾ Husband ಪಾಷಾ 5 ದಿನದಿಂದ ಆಸ್ಪತ್ರೆಗೆ ಬಂದಿಲ್ಲ, ವೈಯಕ್ತಿಕ ಕಾರಣ ನೀಡಿ ರಜೆ!

[lazy-load-videos-and-sticky-control id=”DqjMhXKWFg0″]

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಬಂಧನದ ಬಳಿಕ ಆಕೆಯ ಪತಿ ಎಂದು ಹೇಳಲಾಗಿರುವ ಡಾ ಅಜೀಜ್​ ಪಾಷಾ ಬಗ್ಗೆ ಹಲವಾರು ಪ್ರಶ್ನೆಗಳು ಕೇಳಿಬರುತ್ತಿದೆ.

ಸಂಜನಾ ಪ್ರೇಮ ಪಾಶಕ್ಕೆ ಬಿದ್ದು ತಪ್ಪು ಮಾಡಿದ್ರಾ ವೈದ್ಯ ಪಾಷಾ?
ಸಂಭಾವಿತ ವೈದ್ಯನನ್ನ ಬುಟ್ಟಿಗೆ ಹಾಕ್ಕೊಂಡು ದುಡ್ಡು ಪೀಕಿದ್ಳಾ ಸಂಜನಾ? ಸಂಜನಾ ಪ್ರೇಮ ಪಾಶಕ್ಕೆ ಬಿದ್ದು ತಪ್ಪು ಮಾಡಿದ್ರಾ ವೈದ್ಯ ಪಾಷಾ? ಪ್ರೀತಿ ಹೆಸ್ರಲ್ಲಿ ಪಾಷಾ ಬಳಿಯಲ್ಲಿ ಸಂಜನಾ ದೋಚಿದ್ಳಾ ಕೋಟ್ಯಂತರ ಹಣ? ಎಂದು ಹಲವರು ಮಾತನಾಡುತ್ತಿದ್ದಾರೆ.
ವ್ಯಾಸ್ಕುಲರ್ ಸರ್ಜನ್ ಆಗಿ ಹೆಸರು ಮಾಡಿದ್ದ ವೈದ್ಯ ಡಾ. ಅಜೀಜ್ ಪಾಷಾ ಸ್ವಭಾವತಃ ಸಂಭಾವಿತ ವ್ಯಕ್ತಿ. 15 ವರ್ಷಗಳಿಂದ ಒಂದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಪಾಷಾ ಆಸ್ಪತ್ರೆಯಲ್ಲಿ ಒಳ್ಳೆಯ ಹೆಸರು ಸಹ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಜೊತೆಗೆ, ಇವರ ಬಗ್ಗೆ ಯಾರೇ ಸ್ನೇಹಿತರನ್ನ ಕೇಳಿದ್ರೂ ಅಜೀಜ್​ ಇಂಥ ಕೆಲಸ ಮಾಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಕೆಟ್ಟ ಚಟಕ್ಕೆ ಅವ್ರು ದಾಸರಾಗಿದ್ದಾರೆ ಅಂದ್ರೆ ನಂಬೋದಕ್ಕೆ ಸಾಧ್ಯವೇ ಇಲ್ಲ. ಸಂಜನಾ ಜೊತೆ ಸ್ನೇಹವಿತ್ತು. ಆದ್ರೆ ಡ್ರಗ್ಸ್ ಸೇವನೆ ಮಾಡ್ತಾ ಇದ್ರು ಅನ್ನೋದನ್ನ ನಂಬೋದಕ್ಕೆ ಆಗ್ತಾ ಇಲ್ಲ ಎಂದು ವೈದ್ಯರ ಸ್ನೇಹಿತರು ಹೇಳಿದ್ದಾರೆ.

ಸಿರಿವಂತನಾದ್ರು ಡಾ. ಪಾಷಾಗೆ ಕೆಟ್ಟ ಚಟಗಳು ಯಾವುದೂ ಇರಲಿಲ್ಲ. ಸಿಗರೇಟ್ ಮತ್ತು ಮದ್ಯ ಸೇವನೆಯನ್ನೂ ಕೂಡಾ ಮಾಡಿರೋದು ನೋಡಿಲ್ಲ. ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿದ್ದ ಪಾರ್ಟಿಗಳಲ್ಲೂ ಮದ್ಯ ಸೇವನೆ ಮಾಡ್ತಾ ಇರಲಿಲ್ಲ ಅಂತಾ ಹೇಳಿದ್ದಾರೆ.

ಅವರ ವೈಯಕ್ತಿಕ ಜೀವನ ಹೇಗಿತ್ತೋ ಗೊತ್ತಿಲ್ಲ. ಆದ್ರೆ ಆಸ್ಪತ್ರೆಯಲ್ಲಿ ಮಾತ್ರ ಸಂಭಾವಿತ ವೈದ್ಯರಾಗಿದ್ರು. ಪಾಷಾಗೆ ಎಲ್ಲರ ಜೊತೆ ಒಡನಾಟ ಚನ್ನಾಗಿಯೇ ಇತ್ತು ಎಂದು ವೈದ್ಯರ ಸ್ನೇಹಿತರು ಮತ್ತು ಆಪ್ತರು ತಿಳಿಸಿದ್ದಾರೆ.
ಡಾ. ಪಾಷಾ 5 ದಿನಗಳಿಂದ ಆಸ್ಪತ್ರೆಗೆ ಬಂದಿಲ್ಲ
ಈ ನಡುವೆ ಸಂಜನಾ ಡ್ರಗ್ಸ್ ಕೇಸ್​ನಲ್ಲಿ ಅರೆಸ್ಟ್ ಆದ ಬಳಿಕ ಡಾ. ಪಾಷಾ ಕಳೆದ ಐದು ದಿನಗಳಿಂದ ಆಸ್ಪತ್ರೆಗೆ ಬಂದಿಲ್ಲ ಎಂದು ತಿಳಿದುಬಂದಿದೆ. ವೈಯಕ್ತಿಕ ಕಾರಣ ನೀಡಿ ರಜೆ ಮೇಲೆ ತೆರಳಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಸಂಜನಾ ಮತ್ತು ಪಾಷಾ ವಿವಾಹದ ಫೋಟೋ ವೈರಲ್ ಆಗ್ತಾಯಿದ್ದ ಹಾಗೆ ಅವರು ರಜೆ ಮೇಲೆ ಹೋಗಿದ್ದಾರೆ ಎಂದು ಹೇಳಲಾಗಿದೆ.

Click on your DTH Provider to Add TV9 Kannada