ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಉಕ್ಕಿದ ಕಾಗಿಣಾ ನದಿಯನ್ನು ದಾಟಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಜೊತೆ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ತಮ್ಮ ಸಾಧನೆಗಳ ಬಗ್ಗೆ ಮಾಧ್ಯಮಗಳ ಮುಂದೆ ಅಬ್ಬರದಿಂದ ಮಾತಾಡುತ್ತಾರೆ. ನದಿ ಉಕ್ಕಿದಾಗ ಯಾರೇನೂ ಮಾಡಲಾಗದು ಅದು ಬೇರೆ ವಿಷಯ. ಆದರೆ, ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ಅವಕಾಶವಂತೂ ಇದ್ದೇಇದೆ. ಅಧಿಕಾರಿಗಳ ಜೊತೆ ಕೂತು ಚರ್ಚಿಸಿದರೆ ಪರ್ಯಾಯ ಏರ್ಪಾಟುಗಳು ಖಂಡಿತ ಹೊಳೆಯುತ್ತವೆ.
ಕಲಬುರಗಿ, ಜುಲೈ 24: ಈ ದೃಶ್ಯ ನೋಡಿ ಜನಸಾಮಾನ್ಯರಿಗೆ ಏನನ್ನಿಸುತ್ತದೆ ಅನ್ನೋದು ಬೇರೆ ವಿಚಾರ, ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಜಿಲ್ಲಾ ಮತ್ತು ತಾಲೂಕು ಆಡಳಿತಗಳಿಗೆ ಏನನ್ನನಿಸುತ್ತದೆ ಅನ್ನೋದು ಮುಖ್ಯ. 21 ನೇ ಶತಮಾನದಲ್ಲಿರುವ ನಮಗೆ ಶಾಲಾ ಕಾಲೇಜುಗಳಿಗೆ ಹೋಗಲು ರಸ್ತೆಯಿಲ್ಲ. ಜೋರು ಮಳೆ ಸುರಿದರೆ ಮನೆಯಲ್ಲಿ ಕೂರಬೇಕು, ಆದರೆ ಪರೀಕ್ಷೆ ಬರೆಯುವವರು ಮನೆಯಲ್ಲಿ ಕೂರಲಾದೀತೇ? ಜಿಲ್ಲೆಯ ಸೇಡಂ ತಾಲೂಕಿನ ಸಂಗಾವಿ (ಟಿ) ಗ್ರಾಮದ ಬಿಎ 6ನೇ ಸೆಮಿಸ್ಟರ್ ವಿದ್ಯಾರ್ಥಿನಿಗೆ ಇವತ್ತು ಪರೀಕ್ಷೆ, ಕಾಲೇಜಿಗೆ ಹೋಗಲೇಬೇಕು. ಉಕ್ಕಿರುವ ಕಾಗಿಣಾ ನದಿಯಲ್ಲಿ ಅಪ್ಪನ ಕೈ ಹಿಡಿದು ಆಕೆ ಕಾಲೇಜು ತಲುಪಲು ಒಂದು ಬದಿಯಿಂದ ಮತ್ತೊಂದು ಬದಿಗೆ ನೀರಲ್ಲಿ ನಡೆದು ಹೋಗುತ್ತಿರುವ ದೃಶ್ಯ ಮನ ಕದಡುತ್ತದೆ.
ಇದನ್ನೂ ಓದಿ: ಅಮೇರಿಕ ತೆರಳಲು ಕೇಂದ್ರ ನಿರ್ಬಂಧ ವಿಧಿಸಿದ್ದರಿಂದ ರಾಜ್ಯಕ್ಕೆ ಕನಿಷ್ಠ ₹ 15,000 ಕೋಟಿ ನಷ್ಟವಾಗಿದೆ: ಪ್ರಿಯಾಂಕ್ ಖರ್ಗೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

