ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಕಬ್ಬು, ಬಾಳೆಹಣ್ಣು ನೀಡಿದ ಗ್ರಾಮಸ್ಥರು!

Updated on: Jun 15, 2026 | 2:22 PM

ಕರ್ನಾಟಕ ಗಡಿ ಭಾಗದ ತಮಿಳುನಾಡಿನ ಡೊಂಕರೆಕೋಟೆ ಗ್ರಾಮದಲ್ಲಿ ತಾಯಿಯಿಂದ ಬೇರ್ಪಟ್ಟು ಬಂದ ಮರಿಯಾನೆಗೆ ಗ್ರಾಮಸ್ಥರು ಕಬ್ಬು, ಬಾಳೆಹಣ್ಣು ನೀಡಿ ಹಸಿವು ನೀಗಿಸಿದ್ದಾರೆ. ಆಹಾರ ಅರಸಿ ಬಂದ ಆನೆಯ ಮರಿಯನ್ನು ಮರಳಿ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ. ಗ್ರಾಮಸ್ಥರು ಮಾನವೀಯತೆ ಮೆರೆದ ಘಟನೆಯ ವಿಡಿಯೋ ಇಲ್ಲಿದೆ.

ಬೆಂಗಳೂರು, ಜೂನ್ 15: ತಾಯಿಯಿಂದ ಬೇರ್ಪಟ್ಟ ಮರಿಯಾನೆಯೊಂದು ಆಹಾರ ಅರಸಿಕೊಂಡು ಕರ್ನಾಟಕ-ತಮಿಳುನಾಡು ಗಡಿಭಾಗದ ಡೊಂಕರೆಕೋಟೆ ಸಮೀಪದ ಗ್ರಾಮವೊಂದಕ್ಕೆ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು, ಅದರ ಹಸಿವನ್ನು ನೀಗಿಸಲು ಮುಂದಾಗಿದ್ದಾರೆ. ಮಾನವೀಯತೆ ಮೆರೆದ ಗ್ರಾಮಸ್ಥರು ಮರಿಯಾನೆಗೆ ಕಬ್ಬು ಮತ್ತು ಬಾಳೆಹಣ್ಣು ನೀಡಿ ಉಪಚರಿಸಿದ್ದಾರೆ. ಗ್ರಾಮಸ್ಥರ ಆರೈಕೆಯಿಂದ ಹಸಿವು ನೀಗಿಸಿಕೊಂಡ ಮರಿಯಾನೆ ಸ್ವಲ್ಪ ಸಮಯದ ನಂತರ ಆ ಪ್ರದೇಶದಲ್ಲಿಯೇ ಉಳಿದುಕೊಂಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ದಾವಿಸಿದ್ದಾರೆ. ಮರಿಯಾನೆ ಸದ್ಯ ಸುರಕ್ಷಿತವಾಗಿದ್ದು, ಅದನ್ನು ಮರಳಿ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಸತತ ಪ್ರಯತ್ನ ನಡೆಸುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 15, 2026 02:21 PM
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More