ಬ್ಯಾಂಕಾಕ್​ನಲ್ಲಿ ಒಂಟಿ ಕಾಲಿನ ಮಸಾಜ್​ ಹೇಗಿತ್ತು? ವಿವರಿಸಿದ ದಿಗಂತ್​, ಯೋಗಿ

ಬ್ಯಾಂಕಾಕ್​ನಲ್ಲಿ ಒಂಟಿ ಕಾಲಿನ ಮಸಾಜ್​ ಹೇಗಿತ್ತು? ವಿವರಿಸಿದ ದಿಗಂತ್​, ಯೋಗಿ

TV9 Web
| Updated By: ಮದನ್​ ಕುಮಾರ್​

Updated on: Jan 17, 2024 | 7:37 PM

‘ಬ್ಯಾಚುಲರ್​ ಪಾರ್ಟಿ’ ಸಿನಿಮಾ ಜನವರಿ 26ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ‘ಟಿವಿ9’ ನಡೆಸಿದ ವಿಶೇಷ ಸಂದರ್ಶನದಲ್ಲಿ ದಿಗಂತ್​ ಮತ್ತು ಯೋಗಿ ಅವರು ಹಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್​ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.

ನಟರಾದ ದಿಗಂತ್​ ಮತ್ತು ಲೂಸ್​ ಮಾದ ಯೋಗಿ (Yogi) ಅವರದ್ದು ಹಲವು ವರ್ಷಗಳ ಸ್ನೇಹ. ಅವರಿಬ್ಬರೂ ಜೊತೆಯಾಗಿ ‘ಬ್ಯಾಚುಲರ್​ ಪಾರ್ಟಿ’ (Bachelor Party) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಶೂಟಿಂಗ್​ ಥೈಲೆಂಡ್​ನಲ್ಲಿ ನಡೆದಿದೆ. ಬ್ಯಾಂಕಾಕ್​ನಲ್ಲಿ ಒಂಟಿ ಕಾಲಿನ ಮಸಾಜ್​ ಮಾಡಿಸಿಕೊಂಡ ಬಗ್ಗೆ ದಿಗಂತ್​ (Diganth Manchale) ಮಾತನಾಡಿದ್ದಾರೆ. ಜನವರಿ 26ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ‘ಟಿವಿ9’ ನಡೆಸಿದ ವಿಶೇಷ ಸಂದರ್ಶನದಲ್ಲಿ ದಿಗಂತ್​ ಮತ್ತು ಯೋಗಿ ಅವರು ಹಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್​ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಅಭಿಜಿತ್​ ಮಹೇಶ್​ ಅವರು ನಿರ್ದೇಶನ ಮಾಡಿದ್ದಾರೆ. ಜಿ.ಎಸ್​. ಗುಪ್ತಾ ಹಾಗೂ ರಕ್ಷಿತ್​ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ