ಬಾಗಲಕೋಟೆ: ಹುಚ್ಚೆದ್ದ ಗೋವಿನಿಂದ ಜನರ ಮೇಲೆ ದಾಳಿ

Edited By:

Updated on: Feb 02, 2025 | 2:44 PM

ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಗೋವು ಒಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದಲ್ಲಿ ಹಲವರ ಮೇಲೆ ಗೋವು ದಾಳಿ ಮಾಡಿದ್ದರಿಂದ ಹಿಂದು ಸೇವಾ ಸಮಿತಿ ಗೋವನ್ನು ಸೆರೆಹಿಡಿದಿದೆ. ಆದರೆ ಆಸ್ಪತ್ರೆಗೆ ಸಾಗಿಸುವಾಗ ಗೋವು ದಾರಿಯಲ್ಲಿಯೇ ಮೃತಪಟ್ಟಿತು. ಸಮಿತಿ ಸದಸ್ಯರು ಗೋವಿನ ಅಂತ್ಯಕ್ರಿಯೆ ನೆರವೇರಿಸಿದರು.

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರಸಭೆ ಕಾರ್ಯಾಲಯದ ಬಳಿ ವ್ಯಕ್ತಿಯ ಮೇಲೆ ಹುಚ್ಚೆದ್ದ ಗೋವು ದಾಳಿ ಮಾಡಿದೆ. ದಾಳಿ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ‌ಯಾಗಿದೆ. ನಗರದ ವಿವಿಧ ಕಡೆ ಜನರ‌ ಮೇಲೆ ಗೋವು ದಾಳಿ ಮಾಡಿದೆ. ಇದನ್ನು ಕಂಡ ಹಿಂದು ಸೇವಾ ಸಮಿತಿ ಸಂಘಟನೆ ಸದಸ್ಯರು ಗೋವನ್ನು ಸೆರೆ ಹಿಡಿದರು. ಬಳಿಕ, ಆಸ್ಪತ್ರೆಗೆ ಸಾಗಿಸುವ ವೇಳೆ ಗೋವು ದಾರಿ ಮಧ್ಯೆ ಮೃತಪಟ್ಟಿದೆ. ಹಿಂದು ಸೇವಾ ಸಮಿತಿ ಕಾರ್ಯಕರ್ತರು ಗೋವಿನ ಅಂತ್ಯಸಂಸ್ಕಾರ ‌ಮಾಡಿದರು.