ಬಾಗಲಕೋಟೆಯಲ್ಲೂ ಸ್ಟಿಂಗ್, ಹನಿಟ್ರ್ಯಾಪ್ ಸದ್ದು: ವಿಜಯಾನಂದ ಕಾಶಪ್ಪನವರ, ದೊಡ್ಡನಗೌಡ ಪಾಟೀಲ್ ಮಧ್ಯೆ ವಾಕ್ಸಮರ
ಬಾಗಲಕೋಟೆ ಜಿಲ್ಲೆಯಲ್ಲಿ ಸ್ಟಿಂಗ್ ಮತ್ತು ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ವಿಜಯಾನಂದ ಕಾಶಪ್ಪನವರ್ ಮತ್ತು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ನಡುವೆ ತೀವ್ರ ವಾಕ್ಸಮರ ಶುರುವಾಗಿದೆ. ಕಾಶಪ್ಪನವರ್ ವಿಡಿಯೋ ಕುರಿತು ಆರೋಪ-ಪ್ರತ್ಯಾರೋಪಗಳು, ಕಮಿಷನ್ ದಂಧೆ, ಮರಳು ಮಾಫಿಯಾ ಹಾಗೂ ಇಳಕಲ್‌ನಲ್ಲಿನ ಹನಿಟ್ರ್ಯಾಪ್ ದಂಧೆಯ ಬಗ್ಗೆ ಪರಸ್ಪರ ವಾಗ್ದಾಳಿಗಳು ಮುಂದುವರೆದಿವೆ.
ಬಾಗಲಕೋಟೆ, ನವೆಂಬರ್ 04: ಸ್ಟಿಂಗ್ ಹಾಗೂ ಹನಿಟ್ರ್ಯಾಪ್ ವಿಚಾರವಾಗಿ ಬಾಗಲಕೋಟೆಯಲ್ಲೂ ಟಾಕ್ ವಾರ್ ಶುರುವಾಗಿದೆ. ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ನಡುವೆ ವಾಕ್ಸಮರ ನಡೆದಿದೆ. ವಿಡಿಯೋ ಕಾಲ್ ವಿಚಾರ, ಹನಿಟ್ರ್ಯಾಪ್ ಆರೋಪದ ಬಗ್ಗೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ವಿಜಯಾನಂದ ಕಾಶಪ್ಪನವರ್ ಯುವತಿಯೊಂದಿಗೆ ವಿಡಿಯೋ ಕಾಲ್ ಮಾತನಾಡಿರುವ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ‘ಈ ವಿಡಿಯೋವನ್ನು ದೊಡ್ಡನಗೌಡ ಪಾಟೀಲ್ ದುರುದ್ದೇಶದಿಂದ ಹರಿಬಿಟ್ಟಿದ್ದಾರೆ ಎಂದು ಕಾಶಪ್ಪನವರ್ ಆರೋಪಿಸಿದ್ದಾರೆ. ಅಲ್ಲದೆ, ಮಾಧ್ಯಮಗಳಿಗೆ ಹಣ ನೀಡಿ ತಮ್ಮ ವಿರುದ್ಧ ಪ್ರಚಾರ ಮಾಡಿಸಿದ್ದಾರೆ’ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ದೊಡ್ಡನಗೌಡ ಪಾಟೀಲ್, ‘ತಾವು ಹಣ ನೀಡಿ ಪ್ರಸಾರ ಮಾಡಿಸಿದ್ದರೆ ದಾಖಲೆಗಳನ್ನು ಒದಗಿಸುವಂತೆ ಕಾಶಪ್ಪನವರ್‌ಗೆ ಸವಾಲು ಹಾಕಿದ್ದಾರೆ.’
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
