ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ ಎಂದ ಸಚಿವ ಯುಟಿ ಖಾದರ್
ಮುಖ್ಯಾಂಶಗಳು
- ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕರೆಂಟ್ ಇಲ್ಲದ ವಿಚಾರ
- ಬಾಣಂತಿಯರು ಸೇರಿದಂತೆ ಹಸುಗೂಸುಗಳು ಪರದಾಟ
- ತನಿಖೆ ಮಾಡುತ್ತೇವೆ ಎಂದ ಸಚಿವ ಯುಟಿ ಖಾದರ್
ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ಉಂಟಾದ ಸಮಸ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ. ಕರೆಂಟ್ ಹೋದಾಗ ಜನರೇಟರ್ ಅಥವಾ ಯುಪಿಎಸ್ ಏಕೆ ಕಾರ್ಯನಿರ್ವಹಿಸಲಿಲ್ಲ ಎಂದು ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ವೈದ್ಯರ ಸಮಯೋಚಿತ ಕ್ರಮವನ್ನು ಶ್ಲಾಘಿಸಿದ ಸಚಿವರು, ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ.
ಬಳ್ಳಾರಿ, ಅಕ್ಟೋಬರ್ 10: ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ರೋಗಿಗಳು ಪರದಾಡಿದ್ದರು. ಬಾಣಂತಿಯರು ಸೇರಿದಂತೆ ಹಸುಗೂಸು ಇಡೀ ರಾತ್ರಿ ಮೊಬೈಲ್ ಟಾರ್ಚ್ನಲ್ಲೇ ಕಳೆದಿದ್ದರು. ಸದ್ಯ ಈ ವಿಚಾರ ಆರೋಗ್ಯ ಸಚಿವ ಯುಟಿ ಖಾದರ್ ಅವರ ಗಮನಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಟಿವಿ9 ಜೊತೆಗೆ ಮಾತನಾಡಿರುವ ಅವರು, ‘ಅವತ್ತು ಆಪರೇಷನ್ ಮಾಡುತ್ತಿದ್ದ ವೇಳೆ ಕರೆಂಟ್ ಹೋಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರೇಟರ್ ವ್ಯವಸ್ಥೆ ಇರಬೇಕು, ಆದರೆ ಏಕೆ ಜನರೇಟರ್ ವ್ಯವಸ್ಥೆ ಮಾಡಿಲ್ಲವೆಂದು ತನಿಖೆ ಮಾಡುತ್ತೇವೆ’ ಎಂದರು. ‘ವೈದ್ಯರು ರೋಗಿಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ವ್ಯವಸ್ಥೆ ಮಾಡಿದ್ದೇವೆ. ಕರೆಂಟ್ ಹೋದಾಗ ಏಕೆ ಜನರೇಟರ್, ಯುಪಿಎಸ್ ಆನ್ ಆಗಿಲ್ಲವೆಂಬ’ ಬಗ್ಗೆ ತನಿಖೆ ಮಾಡುತ್ತೇವೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 10, 2026 06:35 PM
Loading...
Unable to load recommendations.
Follow Us
