ಪಿಂಕ್ ಲೈನ್ ಮೆಟ್ರೋ ಟನಲ್ ಕಾಮಗಾರಿ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡಿದ ಮುಖ್ಯ ಇಂಜಿನಿಯರ್
ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋದ ಭೂಗರ್ಭ ಸುರಂಗ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಎಂಆರ್‌ಸಿಎಲ್ ಘೋಷಿಸಿದೆ. ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ 12 ನಿಲ್ದಾಣಗಳನ್ನು ಒಳಗೊಂಡ ಈ ಯೋಜನೆಯಲ್ಲಿ ಎಲ್ಲಾ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕೆಲಸಗಳು 5% ಮಾತ್ರ. 9 ಟಿಬಿಎಂ ಯಂತ್ರಗಳನ್ನು ಬಳಸಿ ಈ ಕಾಮಗಾರಿ ಪೂರ್ಣಗೊಂಡಿದೆ ಎಂದಿದ್ದಾರೆ.
ಬೆಂಗಳೂರು, ಫೆಬ್ರವರಿ 17: ನಾಗವಾರದಿಂದ ಗೊಟ್ಟಗೆರೆವರೆಗಿನ 21 km ಮೆಟ್ರೋ ಪಿಂಕ್ ಲೈನ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಬಿಎಂಆರ್‌ಸಿಎಲ್ (bmrcl) ಚೀಫ್ ಇಂಜಿನಿಯರ್ (ಅಂಡರ್ ಗ್ರೌಂಡ್ ವಿಭಾಗ) ಸುಬ್ರಮಣ್ಯ ಗುಡಿಗೆ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯವಾಗಿ ಡೈರಿ ಸರ್ಕಲ್‌ನಿಂದ ನಾಗವಾರದವರೆಗೂ ಅಂಡರ್ಗ್ರೌಂಡ್ ಟನಲ್ ಮಾರ್ಗ ಇರಲಿದ್ದು, ಈ ಮಾರ್ಗ ಸಹ ಬಹುತೇಕ ಕಂಪ್ಲೀಟ್ ಆಗಿದೆ. ಒಟ್ಟು 18 ಸ್ಟೇಷನ್ಗಳು ಮಾಡಲಾಗ್ತಿದ್ದು ಅಂಡರ್ಗ್ರೌಂಡ್ನಲ್ಲಿ 12 ಸ್ಟೇಷನ್ಗಳು ಬರಲಿದೆ. ಬೆಂಗಳೂರಲ್ಲಿ ಅರ್ಧ ಪೋಷನ್ ಮಣ್ಣು, ಮತ್ತು ಕಲ್ಲು ಇರುತ್ತೆ. ಮಣ್ಣು ಮೊದಲು ಬರುತ್ತೆ ಕಲ್ಲು ಕಟ್ ಆಗೋದು ಲೇಟ್ ಆಗುತ್ತೆ. ಸಾಕಷ್ಟು ಸವಾಲುಗಳು ಇಲ್ಲಿ ಕಾಮಗಾರಿ ಮಾಡುವಾಗ ಇದೆ. ಬರಿಗಣ್ಣಿಗೆ ಕಾಣದ್ದು ಸಿಸ್ಟಂ ಅಲ್ಲಿ ಗೊತ್ತಾಗುತ್ತೆ ಅದರ ಮೂಲಕ ಪರಿಹಾರ ಕಂಡು ಕೊಳ್ಳುತ್ತೇವೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.