ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ: ವಿಡಿಯೋ ನೋಡಿ

|

Updated on: Jan 15, 2024 | 6:34 PM

ಶ್ರೀ ಗವಿಗಂಗಾಧರನಿಗೆ ‘ಸೂರ್ಯಾಭಿಷೇಕ’ದ ಕೌತುಕ. ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸುವಾಗ ಶಿವನಿಗೆ ನಮಸ್ಕಾರ ಮಾಡಿದ ಕ್ಷಣವನ್ನ ಭಕ್ತರು ಕಣ್ತುಂಬಿಕೊಂಡರು. ಸಂಜೆ 5.20ರಿಂದ 5.30ರವರೆಗೆ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬಿದ್ದಿತು. ಅಪರೂಪದ ಈ ಕ್ಷಣವನ್ನ ನೋಡಲು ದೇಗುಲದಲ್ಲಿ LED ಹಾಗೂ 5 ಟಿವಿಗಳ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರು, ಜನವರಿ 15: ಶ್ರೀ ಗವಿಗಂಗಾಧರ (Gavi Gangadhareshwara) ನಿಗೆ ‘ಸೂರ್ಯಾಭಿಷೇಕ’ದ ಕೌತುಕ. ದಕ್ಷಿಣದಿಂದ ಉತ್ತರಕ್ಕೆ ಪಥ ಬದಲಿಸುವಾಗ ಶಿವನಿಗೆ ನಮಸ್ಕಾರ ಮಾಡಿದ ಕ್ಷಣವನ್ನ ಭಕ್ತರು ಕಣ್ತುಂಬಿಕೊಂಡರು. ಸಂಜೆ 5.20ರಿಂದ 5.30ರವರೆಗೆ ಸೂರ್ಯರಶ್ಮಿ ಶಿವಲಿಂಗದ ಮೇಲೆ ಬಿದ್ದಿತು. ಅಪರೂಪದ ಈ ಕ್ಷಣವನ್ನ ನೋಡಲು ದೇಗುಲದಲ್ಲಿ LED ಹಾಗೂ 5 ಟಿವಿಗಳ ವ್ಯವಸ್ಥೆ ಮಾಡಲಾಗಿತ್ತು. ಗವಿಗಂಗಾಧರೇಶ್ವರನಿಗೆ ಸೋಮಸುಂದರ ದೀಕ್ಷಿತ್ ನೇತೃತ್ವದಲ್ಲಿ ಪೂರ್ಣಕುಂಭ ಅಭಿಷೇಕ ಮಾಡಲಾಯಿತು. ಸೂರ್ಯರಶ್ಮಿ ಸ್ಪರ್ಶದ ಬಳಿಕ ಮತ್ತೆ ಶಿವನಿಗೆ ವಿಶೇಷ ಪೂಜೆ ಮಾಡಿದ್ದು, ಜತೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಕ್ ಮಾಡಿ.

Follow us on