ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗ ಸ್ಪರ್ಶಿಸಿದ ಸೂರ್ಯ ರಶ್ಮಿ: ಮಕರ ಸಂಕ್ರಾಂತಿ ದಿನ ಕೌತುಕವನ್ನು ಕಣ್ತುಂಬಿಕೊಂಡ ಭಕ್ತರು
ನಗರದ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ನಂದಿ ಕೊಂಬಿನ ಮೂಲಕ ಹಾದುಹೋಗಿ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಮಕರ ಸಂಕ್ರಾಂತಿ ದಿನ ಸೂರ್ಯದೇವ ತನ್ನ ಪಥ ಬದಲಿಸುತ್ತಾನೆ. ಈ ಪಥ ಬದಲಿಸುವಾಗ ಶಿವಲಿಂಗಕ್ಕೆ ಸೂರ್ಯದೇವ ನಮಿಸುತ್ತಾನೆ. ಸಂಕ್ರಾಂತಿ ದಿನ ಈ ಕೌತುಕವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.
ಬೆಂಗಳೂರು, ಜನವರಿ 15: ನಗರದ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ (Gavigangadhareshwara) ದೇಗುಲದ ಶಿವಲಿಂಗವನ್ನು ನಂದಿ ಕೊಂಬಿನ ಮೂಲಕ ಹಾದುಹೋಗಿ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಮಕರ ಸಂಕ್ರಾಂತಿ ದಿನ ಸೂರ್ಯದೇವ ತನ್ನ ಪಥ ಬದಲಿಸುತ್ತಾನೆ. ಈ ಪಥ ಬದಲಿಸುವಾಗ ಶಿವಲಿಂಗಕ್ಕೆ ಸೂರ್ಯದೇವ ನಮಿಸುತ್ತಾನೆ. ಸಂಕ್ರಾಂತಿ ದಿನ ಈ ಕೌತುಕವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ದೇವಸ್ಥಾನದ ಹೊರಗೆ ಬೃಹತ್ ಎಲ್ಇಡಿ ಪರದೆ ಅಳವಡಿಕೆ ಮಾಡಲಾಗಿದೆ.
ಸೂರ್ಯನ ರಶ್ಮಿ ಸ್ಪರ್ಶಿಸಿದ ಬಳಿಕ ಗಂಗಾಧರನಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡಲಾಗಿದೆ. ಬಳಿಕ ಗವಿಗಂಗಾಧರೇಶ್ವರನಿಗೆ ಪ್ರಧಾನ ಅರ್ಚಕ ಸೋಮಸುಂದರ ನೇತೃತ್ವದಲ್ಲಿ ಪೂರ್ಣ ಕುಂಭ ಅಭಿಷೇಕ ಮಾಡಲಾಗಿದೆ. ಈಗಾಗಲೇ ಸಾಕಷ್ಡು ಸಂಖ್ಯೆಯಲ್ಲಿ ದರ್ಶನಕ್ಕಾಗಿ ಕಾದು ನಿಂತಿರುವ ಭಕ್ತದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಿಷ್ಟು
ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ದಕ್ಷಿಣಾಭಿಮುಖಿಯಾಗಿರುವ ಶಿವಲಿಂಗಕ್ಕೆ ಸೂರ್ಯ ನಮಸ್ಕಾರ. ಈಗ ಸೂರ್ಯ ದ್ವಾರದಿಂದ ಆಲಯದ ಅಂತರ್ದ್ವಾರ ಪ್ರವೇಶ ಮಾಡಲಾಗುವುದು. ಅಂತರ್ದ್ವಾರ ಪ್ರವೇಶಿಸಿ ಶಿವನಿಗೆ ಸೂರ್ಯ ಅಭಿಷೇಕ ಮಾಡಲಿದ್ದಾನೆ. ಋಷಿ ಮುನಿಗಳಿಂದ ಪೂಜಿಸಲ್ಪಟ್ಟ ಪ್ರಾಚೀನ ಶಿವಲಿಂಗವಿದು.
ಇದನ್ನೂ ಓದಿ: ಮಕರ ಸಂಕ್ರಾಂತಿ: ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಹೆಚ್ಡಿ ರೇವಣ್ಣ ಭೇಟಿ
ಎಲ್ಲಾ ಶಿವಾಲಯಗಳು ಪೂರ್ವ, ಪಶ್ಚಿಮಾಭಿಮುಖವಾಗಿವೆ. ಆದರೆ ಈ ದೇವಾಲಯ ದಕ್ಷಿಣಾಭಿಮುಖವಾಗಿರುವುದು ವಿಶಿಷ್ಠ. ಸೂರ್ಯ ತನ್ನ ಪಥ ಬದಲಿಸುವಾಗ ಶಿವನಿಗೆ ಅಭಿಷೇಕ ಮಾಡುತ್ತಾನೆ. ಮಕರ ಸಂಕ್ರಾಂತಿ ದಿನದಂದು ಶಿವಲಿಂಗಕ್ಕೆ ಸೂರ್ಯ ನಮಿಸುತ್ತಾನೆ ಎಂದು ತಿಳಿಸಿದ್ದಾರೆ.
ಒಂದು ಜಲಕಂಟಕ ಆಗಬಹುದು
ಪ್ರಸನ್ನ ಪಾರ್ವತಿ ಗವಿಗಂಗಾಧರೆಶ್ವರ ದೇವಸ್ಥಾನದಲ್ಲಿ ಇಡೀ ಭೂಲೋಕದಲ್ಲಿಯೇ ವಿಶೇಷ ದೇವಸ್ಥಾನ. ಈ ವಿಶೇಷ ದೇವಸ್ಥಾನದಲ್ಲಿ ದಕ್ಷಿಣಾಭಿಮುಖವಾಗಿ ಇರುವ ಈಶ್ವರನ ಮೇಲೆ ಒಂದೇ ಒಂದು ದಿನ ಸೂರ್ಯನ ರಶ್ಮಿ ಬೀಳುತ್ತೆ. 46 ಸೆಂಕೆಂಡ್ಗಳ ಕಾಲ ಗಂಗಾಧರನ ಮೇಲೆ ಸ್ಪರ್ಶಿಸಿದ್ದಾನೆ.
ಇದನ್ನೂ ಓದಿ: ಸಂಕ್ರಮಣ ಸಡಗರ: ಬಣ್ಣಬಣ್ಣದ ಇಳಕಲ್ ಸೀರೆಯುಟ್ಟು ಹಾಡು ಹೇಳಿ ಸಂಭ್ರಮಿಸಿದ ಮಹಿಳೆಯರು
ಒಂದು ಜಲಕಂಟಕ ಆಗಬಹುದು. ಗಂಗೆಯ ದರ್ಶನವನ್ನ ಸೂರ್ಯ ದರ್ಶನ ಮಾಡಿಲ್ಲ. ಹೀಗಾಗಿ ಸ್ವಲ್ಪ ಜಲಕಂಟಕಗಳು ಆಗಬಹುದು. ಇಂದು ಸೂರ್ಯ ಗಂಗೆಯ ದರ್ಶನ ಮಾಡಿಲ್ಲ. ಹೀಗಾಗಿ ಗಂಗೆ ಕೊಪಿತಗೊಂಡಿದ್ದಳೆ. ರುದ್ರಾಭಿಷೇಕದ ಮಂತ್ರದಿಂದ ಜಲಭಿಷೇಕ ಮಾಡುವುದರಿಂದ ಗಂಗೆಯನ್ನ ಸಮಾಧಾನ ಪಡಿಸಬಹುದು ಎಂದು ಸೋಮ ಸುಂದರ ದೀಕ್ಷಿತ್ ಹೇಳಿದ್ದಾರೆ.
ಇದು ಒಂದು ವಿಸ್ಮಯ: ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಗವಿ ಗಂಗಾಧರನ ಪಾದ ಸ್ಪರ್ಶ ಸೂರ್ಯ ಮಾಡಿದ್ದಾರೆ. ಇದು ಒಂದು ವಿಸ್ಮಯ. ನಮ್ಮ ಹಿರಿಯರು ದೇಗುಲವನ್ನು ವೈಜ್ಞಾನಿಕವಾಗಿ ಹೇಗೆ ಕಟ್ಟಬಹುದು ಎಂಬುದಕ್ಕೆ ಇದು ಉದಾಹರಣೆ. ಇಲ್ಲಿರುವ ಶಿಲ್ಪಕಲೆ, ಆಗಮ ಶಾಸ್ತ್ರದ ಪದ್ದತಿಯಂತೆ ಕಟ್ಟಿದ್ದಾರೆ. ಇಂದು ಗಂಗಾಧರನ ದರ್ಶನ ನಾವು ಮಾಡಿದ್ದೇವೆ ಎಂದಿದ್ದಾರೆ.
ಉತ್ತರ ಅಯೋಧ್ಯೆಯಲ್ಲಿ ಶ್ರೀರಾಮನ ದೇಗುಲ ನೋಡಬೇಕು ಎಂಬುದು ಆಸೆ ಇತ್ತು. ಮಕರ ಸಂಕ್ರಾಂತಿಗೆ ಇದು ಆಗಲಿದೆ. ಜ. 22 ಕ್ಕೆ ಉದ್ಘಾಟನೆ ಆಗಲಿದೆ. ಉದ್ಘಾಟನೆ ಚೆನ್ನಾಗಿ ಆಗಲಿ ಎಂದು ಗವಿ ಗಂಗಾಧರನಿಗೆ ಪ್ರಾರ್ಥನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:38 pm, Mon, 15 January 24