ಮಣಿಯದ ಪರಿಸರ ಮಂಡಳಿ, ಮುಂದುವರಿದ ಬಸನಗೌಡ ಪಾಟೀಲ್ ಯತ್ನಾಳ್ ಧರಣಿ!
ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕೆಲಸ ಶುರುಮಾಡುವ ಅನುಮತಿಯನ್ನು ಹೈಕೋರ್ಟ್ ನೀಡಿದ್ದರೂ ಪರಿಸರ ಮಂಡಳಿ ಇಲ್ಲಸಲ್ಲದ ಕೊಕ್ಕೆ ಹಾಕಿ ಅನುಮತಿ ಪತ್ರ ನೀಡುತ್ತಿಲ್ಲವೆಂದು ಯತ್ನಾಳ್ ಹೇಳುತ್ತಾರೆ. ಬಿಜೆಪಿ ನಾಯಕರು ಮತ್ತು ಶಾಸಕರು ಇವತ್ತು ಯತ್ನಾಳ್ ಧರಣಿಯಲ್ಲಿ ಜೊತೆಗೂಡಲಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನ ರಾಜ್ಯದಾದ್ಯಂತ ಹರಾಜಾಗುತ್ತಿದ್ದರೂ ಅಧಿಕಾರಿಗಳಿಗೆ, ಸಚಿವನಿಗೆ ಮತ್ತು ಸರ್ಕಾರಕ್ಕೆ ಅದರ ಪರಿವೆ ಇದ್ದಂತಿಲ್ಲ. 4 ತಿಂಗಳಿಂದ ಮುಚ್ಚಿರುವ ತಮ್ಮ ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ಅನುಮತಿ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ ಮಧ್ಯಾಹ್ನದಿಂದ ಶುರುಮಾಡಿ ಅಹೋರಾತ್ರಿ ಪರಿಸರ ಭವನದಲ್ಲಿ ದರಣಿ ನಡೆಸಿದರೂ ಅನುಮತಿ ಪತ್ರ ಅವರಿಗೆ ಸಿಕ್ಕಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಸನಗೌಡ ಯತ್ನಾಳ್ ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ಮಾಲಿನ್ಯ ಮಂಡಳಿ ತೊಡಕು, ಅಶೋಕ ಆಕ್ರೋಶ!