ಸಗಣಿದೇ ವಿಭೂತಿ ಯಾಕೆ ಮಾಡ್ಕೋಬೇಕು ಅಂತಾನೆ ಆ ಸ್ವಾಮಿ! ನಾಯಿದೋ ಹಂದಿದೋ ಮಾಡಿ ಹಚ್ಕೊಳ್ಲಿ: ಯತ್ನಾಳ್ ವ್ಯಂಗ್ಯ
ಹಿಂದೂ ಮತ್ತು ಲಿಂಗಾಯತ ಧರ್ಮದ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಾರದ ಮಾತುಗಳನ್ನಾಡಿದ್ದಾರೆ. ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಸದಾ ಪ್ರಶ್ನೆ ಮಾಡುವ ನಿಜಗುಣಾನಂದ ಸ್ವಾಮೀಜಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಯತ್ನಾಳ್, ಮೊದಲು ಕೇಸರಿ ಬಟ್ಟೆ ಕಿತ್ತೊಗೆಯಲಿ ಎಂದಿದ್ದಾರೆ. ಯತ್ನಾಳ್ ಆಕ್ರೋಶ ಮಾತುಗಳ ವಿಡಿಯೋ ಇಲ್ಲಿದೆ.
ಹುಬ್ಬಳ್ಳಿ, ಸೆಪ್ಟೆಂಬರ್ 19: ಜಾತಿ ಗಣತಿಯಲ್ಲಿ ಹಿಂದೂ ಅಂತ ಬರೆಸಿಕೊಳ್ಳಲು ಒಪ್ಪಿದರೆ ಹುಬ್ಬಳ್ಳಿಯ ವೀರಶೈವ ಲಿಂಗಾಯತ ಏಕತಾ ಸಮಾವೇಶದ ನಿರ್ಣಯವನ್ನು ಒಪ್ಪಿಕೊಳ್ಳುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಾರೋ ಆ ಸಭೆಗೆ ನಾನು ಹೋಗುವುದಿಲ್ಲ ಎಂದರು. ನೀವು ಹಿಂದೂ ಧರ್ಮವನ್ನು ವಿರೋಧಿಸುವುದಾದರೆ ಮೊದಲು ಕೇಸರಿ, ಖಾವಿ ಬಟ್ಟೆ ತೆಗೆದು ಬಿಸಾಡಿ. ಅದು ಸನಾತನ ಹಿಂದೂ ಧರ್ಮದ ಸಂಸ್ಕೃತಿ ಎಂದು ಯತ್ನಾಳ್ ಹೇಳಿದರು.
ನಿಜಗುಣಾನಂದ ಸ್ವಾಮೀಜಿಗೆ ಹಿಗ್ಗಾಮುಗ್ಗಾ ಬೈದ ಯತ್ನಾಳ್
‘ಇಸ್ಲಾಂ ಮತ್ತು ಲಿಂಗಾಯತ ಧರ್ಮಕ್ಕೆ ಬಹಳಷ್ಟು ಸಾಮ್ಯತೆಗಳಿವೆ ಎಂದು ನಿಜಗುಣಾನಂದ ಸ್ವಾಮಿ ಹೇಳುತ್ತಾರೆ. ಲಕ್ಷ್ಮೀ ಪೂಜೆ ಯಾಕೆ ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ನೀವ್ಯಾಕೆ ವಿಭೂತಿ ಹಚ್ಚಿಕೊಳ್ಳಬೇಕು? ಗೋವಿನ ಸಗಣಿಯಿಂದಲೇ ಯಾಕೆ ವಿಭೂತಿ ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ನಾಯಿದೋ ಹಂದಿದೋ ಮಾಡಿಕೊಂಡು ಹಚ್ಚಲಿ’ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

