Loading video

ಶಿಷ್ಟಾಚಾರದ ಪ್ರಕಾರ ಬಿಬಿಎಂಪಿ ಅಧಿಕಾರಿಗಳನ್ನು ನನ್ನನ್ನು ಸ್ವಾಗತಿಸಿದ್ದಾರೆ ಅಷ್ಟೇ, ಎಲ್ಲೂ ರೆಡ್ ಕಾರ್ಪೆಟ್ ಇರಲಿಲ್ಲ: ಸಿದ್ದರಾಮಯ್ಯ

Updated on: May 21, 2025 | 8:33 PM

ವಿಪತ್ತುಗಳ ಸಂದರ್ಭದಲ್ಲಿ ರೆಡ್ ಕಾರ್ಪೆಟ್ ಹಾಸಲು ಬರೋದಿಲ್ಲ, ಅದು ತಪ್ಪಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ತಾನು ಯಾವುದೇ ಸ್ಥಳದಲ್ಲಿ ರೆಡ್ ಕಾರ್ಪೆಟ್ ಮೇಲೆ ನಿಂತಿದ್ದನ್ನು ಮಾಧ್ಯಮದವರು ನೋಡಿದ್ದರೆ, ಅದನ್ನು ಕೆಮೆರಾಗಳಲ್ಲಿ ಸೆರೆ ಹಿಡಿದಿದ್ದರೆ ಅದು ಬೇರೆ ವಿಷಯವಾಗಿರುತಿತ್ತು, ರೆಡ್ ಕಾರ್ಪೆಟ್ ಬಿಜೆಪಿಯವರೇ ಹಾಕಿ ಫೋಟೋ ತೆಗೆದಿರಬೇಕು, ಅವರು ಏನು ಬೇಕಾದರೂ ಮಾಡಬಲ್ಲರು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು, ಮೇ 21: ಮಳೆಯಿಂದ ಅಪಾರ ಹಾನಿಗೊಳಗಾಗಿರುವ ಸ್ಥಳಗಳಿಗೆ ತಾವು ಇಂದು ಭೇಟಿ ನೀಡಿದಾಗ ಬಿಬಿಎಂಪಿ ಅಧಿಕಾರಿಗಳು ರೆಡ್ ಕಾರ್ಪೆಟ್ ಸ್ವಾಗತಕ್ಕೆ (red carpet reception) ಅಣಿಯಾಗಿದ್ದರು ಅನ್ನೋದು ಶುದ್ಧ ಸುಳ್ಳು, ಬಿಜೆಪಿಯವರೇ ಹಾಗೆ ಮಾಡಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಿಟಿ ರೌಂಡ್ಸ್ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ತಾನು ಭೇಟಿ ನೀಡಿದ ಯಾವುದಾದರೂ ಸ್ಥಳಗಳ ಪೈಕಿ ಎಲ್ಲಾದರೂ ರೆಡ್ ಕಾರ್ಪೆಟ್ ಮೇಲೆ ನಿಂತಿದ್ದನ್ನು ಮಾಧ್ಯಮದವರು ನೋಡಿದ್ದಾರೆಯೇ? ತಾನು ರಾಜ್ಯದ ಮುಖ್ಯಮಂತ್ರಿಯಾಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಸ್ವಾಗತಿಸಿದ್ದಾರೆ, ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:   ಸಿದ್ದರಾಮಯ್ಯ ಮುಂದೆಯೇ ಯಡಿಯೂರಪ್ಪರನ್ನು ಟೀಕಿಸಿದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ