Loading video

ಬಿಬಿಎಂಪಿ ಚುನಾವಣೆಗಾಗಿ ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ: ಶಿವಕುಮಾರ್

Updated on: Jun 18, 2025 | 1:21 PM

ಸ್ವಚ್ಛ ಬೆಂಗಳೂರು ಕಾರ್ಯಕ್ರಮವನ್ನು ಜಾರಿಗೊಳಿಸಬೇಕಿದೆ, ಅದಕ್ಕಾಗಿ ಒಂದು ಸಹಾಯವಾಣಿಯನ್ನು ಶೀಘ್ರದಲ್ಲೇ ಆರಂಭಿಸುತ್ತೇವೆ, ಸಾರ್ವಜನಿಕರು ಎಲ್ಲೇ ಕಸ ಬಿಸಾಡಿದರೂ ಒಂದು ವಾರದಲ್ಲಿ ಅದನ್ನು ಕ್ಲೀನ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಹಾಗೆಯೇ ರಸ್ತೆಗುಂಡಿಗಳನ್ನು ಮುಚ್ಚಿ ನಗರದ ರಸ್ತೆಗಳನ್ನು ನೇರಗೊಳಿಸಲು ಆದ್ಯತೆಯ ಮೇರೆಗೆ ಶಾಸಕರಿಗೆ ಅನುದಾನಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಜೂನ್ 18: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಮತ್ತೊಮ್ಮೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳನ್ನು (BBMP polls) ಆದಷ್ಟು ಬೇಗ ಮಾಡಿಸುತ್ತೇವೆ ಎಂದು ಹೇಳಿದರು. ಚುನಾವಣೆ ನಡೆಸುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ, ವಿರೋಧ ಪಕ್ಷಗಳ ನಾಯಕರೊಂದಿಗೆ ಈಗಾಗಲೇ ಮಾತಾಡಿದ್ದೇನೆ, ಕೆಲ ಸಲಹೆ ಸೂಚನೆಗಳನ್ನು ಅವರು ನೀಡಿದ್ದಾರೆ, ಆವರೊಂದಿಗೆ ಮತ್ತೊಮ್ಮೆ ಚರ್ಚೆ ಮಾಡಬೇಕಿದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದನ್ನೂ ಮಾಡಲ್ಲ, ಚುನಾವಣೆಗೆ ಸೂಕ್ತ ಸಮಯ ಯಾವುದು ಅಂತ ನಿರ್ಧರಿಸಬೇಕಿದೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:  ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ