ವರುಣ ತಂದಿಟ್ಟ ಆಪತ್ತು; ವಿದ್ಯಾರ್ಥಿಗಳಿಗೆ ಗಾಳಿ ತುಂಬಿದ ಟ್ಯೂಬೇ ದೋಣಿ, ಜೀವ ಭಯದಲ್ಲೇ ಶಾಲೆಗೆ ಹೋಗುವ ಅನಿವಾರ್ಯತೆ
ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ಭಯಾನಕ ದೃಶ್ಯ ಕಂಡು ಬಂದಿದೆ. ಕೆರೆ ತುಂಬಿ ಹಿನ್ನೀರು ಗ್ರಾಮದ ಸಂಪರ್ಕ ಬಂದ್ ಆಗಿದ್ದು ಗ್ರಾಮಸ್ಥರು ಹೊರಗೆ ಬರಬೇಕಾದ್ರೆ ತುಂಬಿದ ಹೊಳೆಯಲ್ಲಿ ಟೈರ್ ಟೂಬ್ಗಳನ್ನೇ ಬೋಟ್ಗಳನ್ನಾಗಿ ಮಾಡಿಕೊಂಡು ಬರಬೇಕಿದೆ. ಶಾಲೆ ಮಕ್ಕಳು ಕೂಡ ಇದರಿಂದ ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ.
ಬೆಳಗಾವಿ, ಆಗಸ್ಟ್.06: ಕಿತ್ತೂರಿನ ನಿಂಗಾಪುರ ಗ್ರಾಮದ ಹುಲಿಕೆರೆ ಹಿನ್ನೀರಿನಲ್ಲಿ ನಿತ್ಯ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ಸರ್ಕಸ್ ಮಾಡುತ್ತ ಶಾಲೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ಟ್ಯೂಬ್ ಮೇಲೇರಿ ವಿದ್ಯಾರ್ಥಿಗಳು ಕೂತರೆ, ಅತ್ತ ಪೋಷಕರು ದಂಡೆಯಲ್ಲಿ ಹಗ್ಗದಿಂದ ಎಳೆದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಂತಾಗಿದೆ. ಸೇತುವೆ ನಿರ್ಮಾಣಕ್ಕೆ 20 ವರ್ಷದಿಂದ ಮನವಿ ಮಾಡ್ತಿದ್ರೂ ಸಂಬಂಧಿಸಿದವರು ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಕೆರೆ ತುಂಬಿ ಹಿನ್ನೀರು ಗ್ರಾಮದ ಸಂಪರ್ಕ ಬಂದ್ ಆಗಿದೆ. ಇದರಿಂದ ಗ್ರಾಮಸ್ಥರು ಹೊರಗೆ ಬರಬೇಕಾದ್ರೆ ತುಂಬಿದ ಹೊಳೆಯಲ್ಲಿ ಟೈರ್ ಟೂಬ್ಗಳನ್ನೇ ಬೋಟ್ಗಳನ್ನಾಗಿ ಮಾಡಿಕೊಂಡು ಬರಬೇಕಿದೆ. ಶಾಲೆ ಮಕ್ಕಳು ಕೂಡ ಶಾಲೆಗೆ ಬರಬೇಕಾದ್ರೆ ಜೀವ ಕೈಯಲ್ಲಿಡಿದು ಟೂಬ್ಗಳ ಮೇಲೆನೇ ಬರಬೇಕಿದೆ.
30ಸಾವಿರ ಹೆಕ್ಟೇರ್ ಪ್ರದೇಶ ಮುಳುಗಿಸಿದ ಕೃಷ್ಣಾ
ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಸದ್ಯಕ್ಕೆ ಕೊನೆಯಾಗುವ ಲಕ್ಷಣ ಕಾಣ್ತಿಲ್ಲ. ಕೃಷ್ಣಾ ನದಿಗೆ 2.90 ಲಕ್ಷ ಕ್ಯುಸೆಕ್ ನೀರು ಬಿಡುಗಡೆಯಾಗಿ, ಚಿಕ್ಕೋಡಿ ಉಪವಿಭಾಗದಲ್ಲಿ 30ಸಾವಿರ ಹೆಕ್ಟೇರ್ ಭೂಪ್ರದೇಶ ಜಲಾವೃತಗೊಂಡಿದೆ. ಕಬ್ಬು, ಸೋಯಾಬಿನ್, ಉದ್ದು, ಮೆಕ್ಕೆಜೋಳ ಸಂಪೂರ್ಣ ಸರ್ವನಾಶವಾಗಿವೆ. ಎಕರೆಗೆ ₹50 ಸಾವಿರದಂತೆ ಬೆಳೆ ಪರಿಹಾರ ನೀಡ್ಬೇಕು ಅಂತ ರೈತರ ಆಗ್ರಹಿಸಿದಾರೆ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ