ಬೆಳಗಾವಿ ಚಳಿಗಾಲದ ಅಧಿವೇಶನ: ಸಚಿವ ಗೋವಿಂದ ಕಾರಜೋಳ ಬಳಸಿದ ಭಾಷೆಗೆ ಸಿಡಿದೆದ್ದ ವಿರೋಧ ಪಕ್ಷದ ಶಾಸಕರು

ಬೆಳಗಾವಿ ಚಳಿಗಾಲದ ಅಧಿವೇಶನ: ಸಚಿವ ಗೋವಿಂದ ಕಾರಜೋಳ ಬಳಸಿದ ಭಾಷೆಗೆ ಸಿಡಿದೆದ್ದ ವಿರೋಧ ಪಕ್ಷದ ಶಾಸಕರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 21, 2022 | 1:56 PM

ಸಿದ್ದರಾಮಯ್ಯ, ಸ್ಪೀಕರ್ ಪೀಠದಲ್ಲಿದ್ದ ಕುಮಾರ ಬಂಗಾರಪ್ಪ ಅವರನ್ನು ಅಡ್ರೆಸ್ ಮಾಡುತ್ತಾ, ಸಚಿವರು ತಮ್ಮನ್ನು ತಾವು ಏನಂದುಕೊಂಡಿದ್ದಾರೆ, ಅವರ ಕ್ಷಮೆಯಾಚಿಸಬೇಕು ಅಂತ ಆಗ್ರಹಿಸಿದರು.

ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ (winter session) ಇವತ್ತು ಕೂಡ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ನೀರಾವರಿ ಸಚಿವ ಗೋವಿಂದ ಕಾರಜೋಳ (Govind Karjol) ಅವರು ವಿರೋಧ ಪಕ್ಷದ ಶಾಸಕರ ವಿರುದ್ಧ ಏಕವಚನದಲ್ಲಿ ಹರಿಹಾಯ್ದ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಸಿಡಿದೆದ್ದರು. ಸಿದ್ದರಾಮಯ್ಯ, ಸ್ಪೀಕರ್ ಪೀಠದಲ್ಲಿದ್ದ ಕುಮಾರ ಬಂಗಾರಪ್ಪ ಅವರನ್ನು ಅಡ್ರೆಸ್ ಮಾಡುತ್ತಾ, ಸಚಿವರು ತಮ್ಮನ್ನು ತಾವು ಏನಂದುಕೊಂಡಿದ್ದಾರೆ, ಅವರ ಕ್ಷಮೆಯಾಚಿಸಬೇಕು ಅಂತ ಆಗ್ರಹಿಸಿದರು. ಸದನದಲ್ಲಿ ಗಲಾಟೆ ಯಾವಮಟ್ಟಿಗಿತ್ತೆಂದರೆ, ಯಾರೇನು ಮಾತಾಡುತ್ತಿದ್ದಾರೆ ಅಂತ ಸ್ಪೀಕರ್ ಆರ್ಥವೇ ಆಗಲಿಲ್ಲ. ಹಾಗಾಗಿ ಅವರು 10 ನಿಮಿಷಗಳ ಅವಧಿಗೆ ಸದನದ ಕಾರ್ಯಕಲಾಪಗಳನ್ನು ಮುಂದೂಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ