ನಾನು ಉಮಾಶ್ರೀ ಅಭಿಮಾನಿಯಲ್ಲ ಮಾಲಾಶ್ರೀ ಅಭಿಮಾನಿ ಎಂದ ಸಚಿವ ಶ್ರೀರಾಮುಲು

ನಾನು ಉಮಾಶ್ರೀ ಅಭಿಮಾನಿಯಲ್ಲ ಮಾಲಾಶ್ರೀ ಅಭಿಮಾನಿ ಎಂದ ಸಚಿವ ಶ್ರೀರಾಮುಲು

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 20, 2022 | 9:53 PM

ನೇಕಾರರ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಅಂತ ಆಕ್ರೋಶ ವ್ಯಕ್ತಪಡಿಸಲಾಯಿತು. ನೇಕಾರರ ಪ್ರತಿಭಟನೆಗೆ ಮಾಜಿ ಸಚಿವೆ ಉಮಾಶ್ರೀ ಸಾಥ್ ನೀಡಿದ್ದರು.

ಬೆಳಗಾವಿ ಸುವರ್ಣ ಸೌಧದ ಮುಂದೆ ನೇಕಾರ (Weavers) ರಿಂದ ಪ್ರತಿಭಟನೆ ಮಾಡಲಾಯಿತು. ನೇಕಾರರ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಅಂತ ಆಕ್ರೋಶ ವ್ಯಕ್ತಪಡಿಸಲಾಯಿತು. ನೇಕಾರರ ಪ್ರತಿಭಟನೆಗೆ ಮಾಜಿ ಸಚಿವೆ ಉಮಾಶ್ರೀ (Umashree) ಸಾಥ್ ನೀಡಿದ್ದರು. ಇದೇ ವೇಳೆ ಪ್ರತಿಭಟನಾಕಾರರನ್ನು ಮನವಲಿಸಲು ಸಚಿವ ಶ್ರೀರಾಮುಲು (Sriramulu) ಆಗಮಿಸಿದರು. ಈ ವೇಳೆ ಮಾತನಾಡಿದ ಅವರು, ಉಮಾಶ್ರೀ ಅನ್ನುವ ಬದಲು ಮಾಲಾಶ್ರೀ ಎಂದರು. ಪ್ರತಿಭಟನಾಕಾರರೆಲ್ಲರು ಬಿದ್ದು ಬಿದ್ದು ನಕ್ಕರು. ನಂತರ ನಾನು ಉಮಾಶ್ರೀ ಅಭಿಮಾನಿಯಲ್ಲ ಮಾಲಾಶ್ರೀ ಅಭಿಮಾನಿ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.