ಮಾನಸಿಕ ಅಸ್ವಸ್ಥನಂತೆ ವರ್ತಿಸಿ ವ್ಯಕ್ತಿ ಹುಚ್ಚಾಟ: ವಿದ್ಯುತ್ ತಂತಿ ಹಿಡಿದುಕೊಳ್ಳಲು ಯತ್ನ
ಬೆಂಗಳೂರಿನ ಜಿಗಣಿಯಲ್ಲಿ ರಾಂಚಿ ಮೂಲದ ರಾಜು ಮುಂಡಾ ಎಂಬ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿ ಇಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಕಟ್ಟಡ ಏರಿದ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ವ್ಯಕ್ತಿಯನ್ನು ಮನವೊಲಿಸಿ ಕೆಳಗಿಳಿಸಿ ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.
ಬೆಂಗಳೂರು, ಫೆಬ್ರವರಿ 21: ಮಾನಸಿಕ ಅಸ್ವಸ್ಥನಂತೆ ವರ್ತಿಸಿ ವ್ಯಕ್ತಿಯಿಂದ ಹುಚ್ಚಾಟ ಮೆರೆದಿರುವಂತಹ ಘಟನೆ ಆನೇಕಲ್ (Anekal) ತಾಲೂಕಿನ ಜಿಗಣಿಯ ಡಬಲ್ ರೋಡ್ ರಸ್ತೆಯ ಒಟಿಸಿ ಸರ್ಕಲ್ ಬಳಿ ನಡೆದಿದೆ. ಜಾರ್ಖಂಡ್‌ನ ರಾಂಚಿ ಮೂಲದ ರಾಜು ಮುಂಡಾನಿಂದ ಹುಚ್ಚಾಟ ಮಾಡಲಾಗಿದೆ. ಎಳನೀರು ಕುಡಿಯುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಬಳಿಕ ಬಿಲ್ಡಿಂಗ್ ಮೇಲೆ ಏರಿ ವಿದ್ಯುತ್ ತಂತಿ ಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಕೆಳಗೆ ಜಿಗಿಯೋದಾಗಿ ಹೇಳಿ ಕೆಲ ಸಮಯ ಆತಂಕ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದಿದ್ದ ಜಿಗಣಿ ಪೊಲೀಸರು, ಕೂಡಲೇ ಕರೆಂಟ್ ಆಫ್ ಮಾಡಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 21, 2025 10:49 PM