ವ್ಯಕ್ತಿಯನ್ನು ಚೀಲಕ್ಕೆ ತುಂಬಿಕೊಂಡು ತಂದು ಕೊರಿಯರ್ ಮಾಡುವಂತೆ ಮಾಡುವಂತೆ ಪಟ್ಟು: ಹೀಗೂ ರೀಲ್ಸ್ ಮಾಡ್ತಾರಾ?

Edited By:

Updated on: Mar 17, 2026 | 11:02 PM

ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ಯುವಕರಿಬ್ಬರು ಚೀಲದಲ್ಲಿ ವ್ಯಕ್ತಿಯನ್ನು ತಂದು, ಪ್ರೊಫೆಷನಲ್ ಕೊರಿಯರ್ಸ್‌ನಲ್ಲಿ ಪಾರ್ಸೆಲ್ ಮಾಡಲು ಯತ್ನಿಸಿದ್ದಾರೆ. ಚೀಲದಲ್ಲಿ ವ್ಯಕ್ತಿ ಇರುವುದನ್ನು ಕಂಡು ಕೊರಿಯರ್ ಸಿಬ್ಬಂದಿ ಆಘಾತಗೊಂಡಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ವೈಯಾಲಿಕಾವಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಪ್ರಾಂಕ್ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರು, ಮಾರ್ಚ್​ 17: ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ಅಚ್ಚರಿ ಮೂಡಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯನ್ನು ಚೀಲಕ್ಕೆ ಹಾಕಿ ಕೊರಿಯರ್ ಶಾಪ್​ಗೆ ತಂದಿದ್ದಾರೆ. ತಂದೆಯನ್ನೇ ಮೂಟೆಯಲ್ಲಿ ಹಾಕಿಕೊಂಡು ಮಗಳು ಬಂದಿದ್ದಳು. ಪುಂಡರ ಹುಚ್ಚಾಟಕ್ಕೆ ಕೊರಿಯರ್ ಶಾಪ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಪ್ರೊಫೆಷನಲ್ ಕೊರಿಯರ್ ಶಾಪ್​ಗೆ ಬಂದ ಪುಂಡರು ಪ್ಲಾಸ್ಟಿಕ್ ಚೀಲದಲ್ಲಿರುವ ವ್ಯಕ್ತಿಯನ್ನು ಕೊರಿಯರ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಈ ವೇಳೆ ಚೀಲ ಅಲುಗಾಡುತ್ತಿರುವುದನ್ನು ಗಮನಿಸಿದ ಕೊರಿಯರ್ ಸಿಬ್ಬಂದಿ ಪರಿಶೀಲಿಸಿದ್ದು, ಅದರೊಳಗೆ ಮನುಷ್ಯನೊಬ್ಬ ಇರುವುದು ಕಂಡುಬಂದಿದೆ. ಒಂದು ಕ್ಷಣ ಕೊರಿಯರ್ ಶಾಪ್ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅವರು ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ಇನ್ನು ಹುಚ್ಚಾಟ ಮಾಡಿದ ಕುಟುಂಬಸ್ಥರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ರಂಜಾನ್ ಹಾಗೂ ಯುಗಾದಿ ಹಬ್ಬಕ್ಕೆ ಬಸ್ ದರಗಳು ಹೆಚ್ಚಾದ ಹಿನ್ನಲೆ ಮೂಟೆ ಕಟ್ಟಿ ಪ್ರಾಂಕ್ ಮಾಡಿ ಮೆಸೇಜ್ ಪಾಸ್ ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ರಂಜಾನ್ ಹಾಗೂ ಯುಗಾದಿ ಹಬ್ಬಕ್ಕೆ ಟಿಕೆಟ್ ಸಿಗಲ್ಲ ಎಂದು ಹೀಗೆ ಮಾಡಿದ್ದೇವೆ. ಈ ರೀತಿ ಮಾಡುವುದು ತಪ್ಪು ಅಂತಾ ಗೊತ್ತಾಗಿದೆ. ಯಾರು ಕೂಡ ಈ ರೀತಿ ಮಾಡದಂತೆ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಸದ್ಯ ವೈಯಾಲಿಕಾವಲ್ ಠಾಣೆ ಪೊಲೀಸರು ಬುದ್ಧಿವಾದ ಹೇಳಿ ಐವರನ್ನು ಬಿಟ್ಟು ಕಳುಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Mar 17, 2026 10:54 PM
Loading...
Unable to load recommendations.
Follow Us
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More