ಬೆಂಗಳೂರು ಖಾಸಗಿ ಕಾಲೇಜು ಹಾಸ್ಟೆಲ್‌ನಲ್ಲಿ ಜಗಳ; ಸಹಾಯಕ ಪ್ರಾಧ್ಯಾಪಕಿಯಿಂದ ಜಾತಿ ಕಿರುಕುಳ ಆರೋಪ!
ಕೆ.ಎಸ್. ಲೇಔಟ್‌ನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಕುಮಾರಿ ಮತ್ತು ಅವರ ರೂಮೇಟ್ ಪ್ರೀತಿ ಜೈನ್ ನಡುವೆ ಗಲಾಟೆ ನಡೆದಿದೆ. ಮಾರ್ಚ್‌ನಲ್ಲಿ ಹಾಸ್ಟೆಲ್ ಸೇರಿದ್ದ ಜ್ಯೋತಿ ಕುಮಾರಿಯವರಿಗೆ, ಪ್ರೀತಿ ಜೈನ್ ಜಾತಿ ಮತ್ತು ಆಹಾರ ಪದ್ಧತಿ ಆಧಾರದ ಮೇಲೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕಿರುಕುಳವು ಕೊನೆಗೆ ಹಲ್ಲೆಯಾಗಿ ಪರಿಣಮಿಸಿದೆ ಎಂದು ಜ್ಯೋತಿ ಕುಮಾರಿ ದೂರಿದ್ದಾರೆ. ಈ ಘಟನೆ ಬಗ್ಗೆ ಜ್ಯೋತಿ ಕುಮಾರಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ಏಪ್ರಿಲ್ 28: ಕೆ.ಎಸ್. ಲೇಔಟ್‌ನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಕುಮಾರಿ ಮತ್ತು ಅವರ ರೂಮೇಟ್ ಪ್ರೀತಿ ಜೈನ್ ನಡುವೆ ಗಲಾಟೆ ನಡೆದಿದೆ. ಮಾರ್ಚ್‌ನಲ್ಲಿ ಹಾಸ್ಟೆಲ್ ಸೇರಿದ್ದ ಜ್ಯೋತಿ ಕುಮಾರಿಯವರಿಗೆ, ಪ್ರೀತಿ ಜೈನ್ ಜಾತಿ ಮತ್ತು ಆಹಾರ ಪದ್ಧತಿ ಆಧಾರದ ಮೇಲೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕಿರುಕುಳವು ಕೊನೆಗೆ ಹಲ್ಲೆಯಾಗಿ ಪರಿಣಮಿಸಿದೆ ಎಂದು ಜ್ಯೋತಿ ಕುಮಾರಿ ದೂರಿದ್ದಾರೆ. ಈ ಘಟನೆ ಬಗ್ಗೆ ಜ್ಯೋತಿ ಕುಮಾರಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜ್ಯೋತಿ ಕುಮಾರಿ ಅವರು ತಮ್ಮ ದೂರಿನಲ್ಲಿ, ಪ್ರೀತಿ ಜೈನ್ ತಮ್ಮ ಜಾತಿಯ ಬಗ್ಗೆ ಪ್ರಶ್ನಿಸಿ, ನಂತರ ಈರುಳ್ಳಿ-ಬೆಳ್ಳುಳ್ಳಿ ಸೇವನೆಯ ಬಗ್ಗೆ ವಿಚಾರಿಸಿದ್ದರು ಎಂದು ತಿಳಿಸಿದ್ದಾರೆ. ಪ್ರೀತಿ ಜೈನ್ ಪದೇ ಪದೇ ಪ್ರಚೋದಿಸುತ್ತಿದ್ದರು ಎಂದು ಜ್ಯೋತಿ ಕುಮಾರಿ ಹೇಳಿದ್ದಾರೆ. ಮಾರ್ಚ್ 27ರಂದು ಪ್ರೀತಿ ಜೈನ್ ತಮ್ಮ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಅನ್ನು ಅತಿಯಾದ ಶಬ್ದದಲ್ಲಿ ಇಟ್ಟಿದ್ದಾಗಲೂ ಜಗಳ ಪ್ರಾರಂಭವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೆಪಿಎಸ್ಸಿ ನೇಮಕಾತಿ ಹಗರಣ: 1.5 ಕೋಟಿ, 22 ಲಕ್ಷದ ಚಿನ್ನಾಭರಣ ಜಪ್ತಿ
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!

