ಒಂದು ವಾರದಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಔಷಧಗಳು ವಶಕ್ಕೆ: ಸಚಿವ ಯುಟಿ ಖಾದರ್ ಮಾಹಿತಿ

Edited By:

Updated on: Sep 08, 2026 | 1:32 PM

ಕಳೆದ ವಾರ ಬೆಂಗಳೂರಿನಲ್ಲಿ ಇ-ಕಾಮರ್ಸ್ ಔಷಧ ಮಾರಾಟದ ಮೇಲೆ ನಡೆದ ದಾಳಿಗಳಲ್ಲಿ ₹3 ಕೋಟಿ ಮೌಲ್ಯದ ಆಹಾರ ಮತ್ತು ಔಷಧ ವಶಪಡಿಸಿಕೊಳ್ಳಲಾಗಿದೆ. ಹೊಸಕೋಟೆಯಲ್ಲಿ ಡಾರ್ಕ್ ಸ್ಟೋರ್‌ಗಳಲ್ಲಿ ಸಂಗ್ರಹಿಸಿದ್ದ ₹45 ಲಕ್ಷ ಮೌಲ್ಯದ ಎಕ್ಸ್​ಪೈರಿ ಔಷಧಗಳಿಗೆ ಮರು ಲೇಬಲಿಂಗ್ ಮಾಡಲಾಗುತ್ತಿತ್ತು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದರು.

ಬೆಂಗಳೂರು, ಸೆಪ್ಟೆಂಬರ್ 8: ಬೆಂಗಳೂರಿನಲ್ಲಿ ಕಳೆದ ವಾರ ಆಹಾರ ಇಲಾಖೆ ನಡೆಸಿದ ದಾಳಿಗಳಲ್ಲಿ 3 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು, ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರೋಗ್ಯ ಇಲಾಖೆ ಸಚಿವ ಯುಟಿ ಖಾದರ್ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಕಾಮರ್ಸ್ ಮೂಲಕ ಔಷಧ ಮಾರಾಟದ ಮೇಲೆ ನಡೆದ ದಾಳಿಯ ವೇಳೆ, ಡಾರ್ಕ್ ಸ್ಟೋರ್‌ಗಳಲ್ಲಿ 45 ಲಕ್ಷ ರೂ. ಮೌಲ್ಯದ ಎಕ್ಸ್​ಪೈರಿ ಔಷಧ ಸಂಗ್ರಹ ಪತ್ತೆಯಾಗಿದ್ದು, ಹೊಸಕೋಟೆಯಲ್ಲಿ ಈ ಔಷಧಗಳಿಗೆ ಮರು ಲೇಬಲಿಂಗ್ ಮಾಡಲಾಗುತ್ತಿತ್ತು. ಅಧಿಕಾರಿಗಳು ಈ ಔಷಧಗಳನ್ನು ಸೀಜ್ ಮಾಡಿದ್ದಾರೆ ಎಂದರು.

ಸಚಿವರುಪೆಪ್​ ಟೈಡ್​​​​ ಪಾರ್ಟಿ ಬಗ್ಗೆಯೂ ಮಾಹಿತಿ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಬಂದ ನಂತರ, ಇಲಾಖೆಯು ತನಿಖೆ ನಡೆಸಿತು. ಸಂಘಟಕರು ತಾವು ಎಲೈಟ್ ವರ್ಗಕ್ಕೆ ಹೊಸ ಪೌಷ್ಟಿಕಾಂಶ ಮತ್ತು ಫಾರ್ಮಾಸ್ಯುಟಿಕಲ್ ಐಟಂಗಳನ್ನು ಪರಿಚಯಿಸುತ್ತಿರುವುದಾಗಿ ತಿಳಿಸಿದರು. ಈ ಐಟಂಗಳು ಅಮೆಜಾನ್‌ನ ಡಾರ್ಕ್ ಸ್ಟೋರ್‌ಗಳಿಂದ ಬಂದಿವೆ ಎಂದು ಅವರು ಒಪ್ಪಿಕೊಂಡರು. ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಬದ್ಧವಾಗಿದೆ ಎಂದು ಖಾದರ್ ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More