ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸ್: ಡ್ರೈವರ್ ಟ್ಯಾಲೆಂಟ್ ಮೆಚ್ಚಬೇಕೆಂದ ಲಾಯರ್!
ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ನಡೆದ ಲಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಅವರ ವಕೀಲ ನಾರಾಯಣ ಸ್ವಾಮಿ ಜಿ. ಸ್ಪಷ್ಟನೆ ನೀಡಿದ್ದಾರೆ. ಇದು ಡ್ರೈವರ್‌ನಿಂದ ನಡೆದ ಆಕಸ್ಮಿಕ ಸ್ಕಿಡ್ ಹೊರತು, ಉದ್ದೇಶಪೂರ್ವಕ ಡ್ರಿಫ್ಟಿಂಗ್ ಅಲ್ಲ ಎಂದು ಅವರು ಹೇಳಿದ್ದಾರೆ. ರಿಕ್ಕಿ ರೈ ಘಟನೆ ನಡೆದಾಗ ಕಾರಿನಲ್ಲಿದ್ದರೂ, ರಷ್ಯಾದಿಂದ ಆಗಷ್ಟೇ ಬಂದಿದ್ದರಿಂದ ಚಾಲನೆ ಮಾಡುತ್ತಿರಲಿಲ್ಲ. ಈ ಪ್ರಕರಣಕ್ಕೆ ಅತಿಯಾದ ಮಹತ್ವ ನೀಡಲಾಗಿದೆ ಎಂದು ವಕೀಲರು ಆಕ್ಷೇಪಿಸಿದ್ದಾರೆ.
ಬೆಂಗಳೂರು, ಮಾರ್ಚ್ 24: ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ನಡೆದ ಲಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಜಿ. ಸ್ಪಷ್ಟನೆ ನೀಡಿದ್ದಾರೆ. ಈ ಘಟನೆ ಉದ್ದೇಶಪೂರ್ವಕ ಡ್ರಿಫ್ಟಿಂಗ್ ಆಗಿರದೆ, ಕಾರಿನ ಬ್ರೇಕ್ ಸಮಸ್ಯೆಯಿಂದ ಅಥವಾ ರಸ್ತೆಯ ಮರಳಿನ ಕಾರಣದಿಂದ ಉಂಟಾದ ಆಕಸ್ಮಿಕ ಸ್ಕಿಡ್ ಆಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆ ನಡೆದ ರಾತ್ರಿ ರಿಕ್ಕಿ ರೈ ಕಾರಿನಲ್ಲಿದ್ದರು. ಆದರೆ, ಅವರು ರಷ್ಯಾದಿಂದ ಭಾರತಕ್ಕೆ ಬಂದ ಕೇವಲ ಎರಡು ದಿನಗಳ ನಂತರ ಈ ಘಟನೆ ಸಂಭವಿಸಿದೆ. ಕಾರು ಸರ್ವೀಸ್‌ನಿಂದ ಹಿಂದಿರುಗಿಸುವಾಗ ಡ್ರೈವರ್ ಇದನ್ನು ಚಲಾಯಿಸುತ್ತಿದ್ದರು ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.
ರಿಕ್ಕಿ ರೈ ಕಾರಿನಲ್ಲಿದ್ದರು. ಆದರೆ, ಅವರು ಚಲಾಯಿಸುತ್ತಿರಲಿಲ್ಲ. ಆಕಸ್ಮಿಕವಾಗಿ ಕಾರು ಸ್ಕಿಡ್ ಆದಾಗ ಚಾಲಕ ಅದನ್ನು ನಿಯಂತ್ರಿಸಿ ಕಾರು ನಿಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಕಾರು ಡ್ರೈವರ್ನ ಟ್ಯಾಲೆಂಟ್ ಮೆಚ್ಚಬೇಕು ಎಂದು ವಕೀಲರು ಹೇಳಿದ್ದಾರೆ. ಆದರೆ, ಲಾಯರ್ ಈ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗೆ ಗುರಿಯಾಗುತ್ತಿದೆ.
