AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮಾಸ್ ಮರ್ಡರ್: ಊಟದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಂತರ ಕೊಲೆ ಮಾಡಿದ ಶಂಕೆ!

ಬೆಂಗಳೂರು ಮಾಸ್ ಮರ್ಡರ್: ಊಟದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಂತರ ಕೊಲೆ ಮಾಡಿದ ಶಂಕೆ!

ಭಾವನಾ ಹೆಗಡೆ
|

Updated on:Nov 06, 2026 | 12:19 PM

Share

ಬೆಂಗಳೂರಿನ ಶ್ರೀರಾಮಪುರದಲ್ಲಿ ನಡೆದ ಏಳು ಜನರ ಭೀಕರ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕ್ಯಾಬ್ ಚಾಲಕ ಇಂದುಶೇಖರ್ ಪತ್ನಿ ಮೇಲಿನ ಕೋಪಕ್ಕೆ ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದಿದ್ದಾನೆ. ಊಟದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಂತರ ಒರಳುಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಮೃತದೇಹಗಳನ್ನು ವಿವಿಧೆಡೆ ಎಸೆದಿದ್ದ ಎನ್ನಲಾಗಿದೆ.

ಬೆಂಗಳೂರು, ನವೆಂಬರ್ 06: ಬೆಂಗಳೂರಿನ ಒಂದೇ ಕುಟುಂಬರ್ 7 ಜನರ ಹತ್ಯೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಆರೋಪಿ ಇಂದುಶೇಖರ್ ತನ್ನ ಪತ್ನಿ ಮೇಲಿನ ಕೋಪಕ್ಕೆ ಈ ಕೃತ್ಯ ಎಸಗಿದ್ದಾನೆ. ಮನೆಗೆ ಒಬ್ಬೊಬ್ಬರನ್ನೇ ಕರೆಸಿಕೊಂಡು ಬಾಡೂಟದ ಆಮಿಷವೊಡ್ಡಿ, ಊಟದಲ್ಲಿ ಮತ್ತಿನ ಮಾತ್ರೆಗಳನ್ನು ಬೆರೆಸಿ ಪ್ರಜ್ಞಾಹೀನರನ್ನಾಗಿ ಮಾಡಿ, ನಂತರ ಒರಳುಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಕೊಲೆ ನಂತರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ಬೇರೆ ಬೇರೆ ಕಡೆ ಎಸೆದಿರುವುದು ಬೆಳಕಿಗೆ ಬಂದಿದೆ. ನಂದಿಬೆಟ್ಟದ ಸುತ್ತಮುತ್ತ ಏಳು ವರ್ಷದ ಪುನೀತ್‌ನ ಶವ ಪತ್ತೆಯಾಗಿದ್ದು, ಇತರ ಶವಗಳ ಶೋಧ ಕಾರ್ಯ ನಡೆಯುತ್ತಿದೆ. ರಾಜಾಜಿನಗರ ಪೊಲೀಸರು ಆರೋಪಿ ಶೇಖರ್‌ನನ್ನು ಬಂಧಿಸಿದ್ದಾರೆ. 17 ವರ್ಷದ ಪುತ್ರಿ ಸಹ ತಂದೆಯ ಈ ಕೃತ್ಯಕ್ಕೆ ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಆಕೆ ಸದ್ಯ ನಾಪತ್ತೆಯಾಗಿದ್ದಾಳೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 06, 2026 12:18 PM

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More