AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?: ಇಲ್ಲಿದೆ Exclusive ವಿಡಿಯೋ

ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?: ಇಲ್ಲಿದೆ Exclusive ವಿಡಿಯೋ

ಕಿರಣ್​ ಸೂರ್ಯ
| Edited By: |

Updated on:Oct 26, 2026 | 2:32 PM

Share

ನವೆಂಬರ್ 1ರಂದು ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ಸಿಗಲಿದ್ದು, ಬಿಇಎಂಎಲ್ ನಿರ್ಮಿತ ಈ ಹೈಟೆಕ್ ರೈಲು ಪ್ರಯಾಣದ ಅವಧಿಯನ್ನು 16 ಗಂಟೆಗಳಿಗೆ ತಗ್ಗಿಸಲಿದೆ. ಒಟ್ಟು 16 ಕೋಚ್​​ಗಳನ್ನು ಹೊಂದಿರುವ ರೈಲು, 823 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಅಷ್ಟಕ್ಕೂ ಈ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು ಹೇಗಿದೆ ಎಂಬುದ ಪ್ರತ್ಯಕ್ಷ ವರದಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್​​ 26: ನವೆಂಬರ್ 1ರಂದು ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲಿಗೆ ಚಾಲನೆ ಸಿಗಲಿದ್ದು, ಇದು ದಕ್ಷಿಣ ಭಾರತದ ಮೊದಲ ಮತ್ತು ದೇಶದ ಎರಡನೇ ಹೈಟೆಕ್ ರೈಲಾಗಿದೆ. ಈ ರೈಲಿನಲ್ಲಿ ಮೂರು ಟೈರ್​​ 11, ಎರಡು ಟೈರ್​​ನ 4, ಫಸ್ಟ್‌ ಎಸಿ 1 ಸೇರಿದಂತೆ ಒಟ್ಟು 16 ಕೋಚ್​​ಗಳಿವೆ. 823 ಪ್ರಯಾಣಿಕರ ಸಾಮರ್ಥ್ಯವನ್ನು ಇದು ಹೊಂದಿದ್ದು, ರೈಲು ಬೆಂಗಳೂರಿನ ಬಿಇಎಂಎಲ್ನಲ್ಲಿ ನಿರ್ಮಾಣವಾಗಿರುವುದು ಮತ್ತೊಂದು ವಿಶೇಷವಾಗಿದೆ. ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ನಡುವೆ ಇದು ಸಂಚಾರ ಮಾಡಲಿದ್ದು, ಪ್ರಯಾಣದ ಅವಧಿ ಸುಮಾರು 16 ಗಂಟೆಗಳಾಗಿರಲಿವೆ. ಅಷ್ಟಕ್ಕೂ ಈ ನೂತನ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು ಹೇಗಿದೆ ಎಂಬುದ ಪ್ರತ್ಯಕ್ಷ ವರದಿ ಇಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Oct 26, 2026 01:59 PM

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More