ಬೆಂಗಳೂರು ಮಳೆ: 2 ಮನೆಗಳ ಮೇಲೆ ಬಿದ್ದ ಮರ, 5 ಕಾರು, 4 ಬೈಕ್ ಜಖಂ
ಬೆಂಗಳೂರು ನಗರದ ರಾಜಾಜಿನಗರ, ಗಿರಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವು ಕಡೆಗಳಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಾಗಿದೆ. ರಾಜಾಜಿನಗರದಲ್ಲಿ ಮನೆಗಳ ಮೇಲೆ ಮರಬಿದ್ದು ಭಾರಿ ಹಾನಿಯಾಗಿದೆ. ಕಾರುಗಳು, ಬೈಕ್ ಜಖಂಗೊಂಡಿವೆ. ಮಳೆ ಅವಾಂತರದ ಬಗ್ಗೆ ನಿವಾಸಿಗಳು ಅಳಲುತೋಡಿಕೊಂಡಿದ್ದಾರೆ. ಅವಾಂತರದ ವಿಡಿಯೋ ಇಲ್ಲಿದೆ ನೋಡಿ.
ಬೆಂಗಳೂರು, ಸೆಪ್ಟೆಂಬರ್ 11: ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾಜಾಜಿನಗರದ 4ನೇ ಬ್ಲಾಕ್ನಲ್ಲಿ ಎರಡು ಮನೆಗಳ ಮೇಲೆ ಮರ ಬಿದ್ದಿದೆ. ಚಂದ್ರಮ್ಮ, ಪೀಟರ್ ಎಂಬುವರ ಮನೆಗಳ ಮೇಲೆ ಬೃಹತ್ ಮರ ಬಿದ್ದು ಹಾನಿ ಸಂಭವಿಸಿದೆ. ಮರ ಬಿದ್ದು 5 ಕಾರು, ಟಾಟಾ ಏಸ್ ವಾಹನ, 3-4 ಬೈಕ್ಗಳು ಜಖಂಗೊಂಡಿವೆ. ಮನೆಗಳ ಮೇಲೆ ಮರ ಬಿದ್ದ ಪರಿಣಾಮ 2 ಕುಟುಂಬಗಳಿಗೆ ದಿಗ್ಬಂಧನ ಹಾಕಿದಂತಾಗಿ ಮನೆಯಿಂದ ಹೊರಬರಲಾಗದೆ ಪರದಾಟ ನಡೆಸಿದರು.

