ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ಯುವತಿ, ಆಗಿದ್ದೇನು?
ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಅತಿ ವೇಗದ ಚಾಲನೆಯಿಂದ ಯುವತಿ ಆಸ್ಪತ್ರೆ ಸೇರುವಂತಾಗಿದೆ. ಹೌದು...ಜೂನ್ 17ರಂದು ಬೆಳಗ್ಗೆ ಸಾನಿಕೃಷ್ಣ (32) ಎನ್ನುವ ಯುವತಿ , ರ್ಯಾಪಿಡೋ ಬುಕ್ ಮಾಡಿಕೊಂಡು ಬೆಂಗಳೂರಿನ ಬೈರಸಂದ್ರದ ದೊಮ್ಮಲೂರಿಗೆ ಹೊರಟ್ಟಿದ್ದಳು. ಆದ್ರೆ, ಮಾರ್ಗ ಮಧ್ಯೆ ಅಪಘಾತವಾಗಿದೆ. ಟ್ರಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ.
ಬೆಂಗಳೂರು, ಜುಲೈ 06): ಬೆಂಗಳೂರಲ್ಲಿ ರ್‍ಯಾಪಿಡೋ ಚಾಲಕನ ಅತಿ ವೇಗದ ಚಾಲನೆಯಿಂದ ಯುವತಿ ಆಸ್ಪತ್ರೆ ಸೇರುವಂತಾಗಿದೆ. ಹೌದು…ಜೂನ್ 17ರಂದು ಬೆಳಗ್ಗೆ ಸಾನಿಕೃಷ್ಣ (32) ಎನ್ನುವ ಯುವತಿ , ರ್ಯಾಪಿಡೋ ಬುಕ್ ಮಾಡಿಕೊಂಡು ಬೆಂಗಳೂರಿನ ಬೈರಸಂದ್ರದ ದೊಮ್ಮಲೂರಿಗೆ ಹೊರಟ್ಟಿದ್ದಳು. ಆದ್ರೆ, ಮಾರ್ಗ ಮಧ್ಯೆ ಅಪಘಾತವಾಗಿದೆ. ಟ್ರಾಕ್ಟರ್ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಟ್ರ್ಯಾಕ್ಟರ್ ಸಾನಿಕೃಷ್ಣ ಮೇಲೆ ಹರಿದಿದ್ದು, ಗಂಭೀರ ಗಾಯಗಳಾಗಿವೆ. ಬೆಂಗಳೂರಿನಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚಾಗಿರುವ ಕಾರಣ, ಸದ್ಯ ಸಾನಿ ಅವರ ಸ್ವಂತ ಊರಾದ ಕೇರಳದ ಕೋಯಿಕ್ಕೊಡ್ ನಲ್ಲಿರುವ ಮಿತ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ, ರ್ಯಾಪಿಡೋ ಯಾವುದೇ ಹಣ ಸಹಾಯ ಮಾಡಿಲ್ಲ. ಇದರಿಂದ ಯುವತಿ ಇ-ಮೇಲ್ ಮೂಲಕ ದೂರು ನೀಡಿದ್ದು, ಈ ಸಂಬಂಧ
ಜೀವನ್ ಭೀಮಾ ನಗರ ಪೋಲಿಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 06, 2026 07:01 PM
Loading...
Unable to load recommendations.
Follow Us
