ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ

Updated on: Jul 24, 2026 | 3:29 PM

ಬೆಂಗಳೂರಿನ ರಿಚ್ಮಂಡ್ ಟೌನ್‌ನ ರಿನಿಯಾಸ್ ಮುಖ್ಯ ರಸ್ತೆಯಲ್ಲಿ ಬಿಡಾಡಿ ವಾಹನಗಳ ಟೋಯಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ. ಜಿಬಿಎ ಮತ್ತು ಸಂಚಾರ ಪೊಲೀಸರು 15 ದಿನಗಳ ನೋಟಿಸ್ ನೀಡಿದ ನಂತರ ಕ್ರಮ ಕೈಗೊಂಡಿದ್ದಾರೆ. ಸ್ಟಿಕರ್ ಅಂಟಿಸಿದ್ದರೂ ಮಾಲೀಕರು ಪ್ರತಿಕ್ರಿಯಿಸದ ಕಾರಣ, 30ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಬೆಂಗಳೂರು, ಜುಲೈ 24: ಫುಟ್‌ಪಾತ್‌ ಒತ್ತುವರಿ ವಿರುದ್ಧ ಸಚಿವ ಕೃಷ್ಣಬೈರೇಗೌಡ ದೊಡ್ಡ ಸಮರವೇ ಸಾರಿದ್ದರು. ಆ ಬಳಿಕ ರಸ್ತೆ ಬದಿ ವರ್ಷಗಳಿಂದ ನಿಂತಲ್ಲೇ ನಿಂತ ವಾಹನಗಳ ತೆರವಿಗೂ ಕೈ ಹಾಕಿದ್ದಾರೆ. ಈಗಾಗಲೇ ರಸ್ತೆ ಬದಿ ಅನಾಥವಾಗಿ ನಿಂತಿರುವ ವಾಹನಗಳಿಗೆ 15 ದಿನಗಳ ಮುಂಚಿತವಾಗಿಯೇ ನೋಟಿಸ್ ಕೂಡ ಅಂಟಿಸಲಾಗಿದೆ. ಸದ್ಯ ರಿಚ್ಮಂಡ್ ಟೌನ್ ಸುತ್ತಮುತ್ತಲೂ 30ಕ್ಕೂ ಹೆಚ್ಚು ಬಿಡಾಡಿ ವಾಹನಗಳನ್ನ ಗುರುತಿಸಿ ಜಿಬಿಎ ಅಧಿಕಾರಿಗಳು ಖುದ್ದು ಸ್ಟಿಕರ್ ಅಂಟಿಸಿದ್ದರು. ಆದರೆ ವಾಹನಗಳ ಮಾಲೀಕರು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಜಿಬಿಎ ಮತ್ತು ಸಂಚಾರ ಪೊಲೀಸ್​ ಇಲಾಖೆ ಸಿಬ್ಬಂದಿ ನೇರವಾಗಿ ವಾಹನಗಳನ್ನ ಟಾಯಿಂಗ್ ಮುಖಾಂತರ ಜಾಪ್ತಿ ಮಾಡುತ್ತಿದ್ದಾರೆ.

ವರದಿ: ಅರುಣ್​​ ಕುಮಾರ್​

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 24, 2026 03:12 PM
Loading...
Unable to load recommendations.
Follow Us
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More