ಕಾರಿನ ಮಿರರ್​ ಮುರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಕ್​​ ಸವಾರನ ದರ್ಪ: ವಿಡಿಯೋ ವೈರಲ್​​

Updated on: Feb 05, 2026 | 2:08 PM

ಬೆಂಗಳೂರಿನಲ್ಲಿ ರೋಡ್ ರೇಜ್​ ಪ್ರಕರಣಗಳು ಮೇಲಿಂದ ಮೇಲೆ ನವರದಿಯಾಗುತ್ತಿದ್ದು, ಕಾರಿಗೆ ಬೈಕ್​ನಿಂದ ಡಿಕ್ಕಿ ಹೊಡೆದು ಸವಾರ ಕಿರಿಕ್ ಮಾಡಿರುವ ಘಟನೆ ಮಾದವಾರ ಜಂಕ್ಷನ್ ಬಳಿ ನಡೆದಿದೆ. ನೆಲಮಂಗಲದಿಂದ ಮಾನ್ಯತಾ ಟೆಕ್​ಪಾರ್ಕ್​ಗೆ ತೆರಳುತ್ತಿದ್ದ ಆದಿತ್ಯ ಎಂಬವರ ಕಾರಿಗೆ ಡಿಕ್ಕಿ ಹೊಡೆದ ಬೈಕ್​​ ಸವಾರ ದರ್ಪ ತೋರಿದ್ದಾನೆ. ಕಾರಿಗೆ ಅಡ್ಡ ಹಾಕಿ ಮಿರರ್ ಮುರಿದು ಅವಾಚ್ಯ ಶಬ್ದದಿಂದ ನಿಂದನೆ ಮಾಡಿದ್ದಾನೆ.

ನೆಲಮಂಗಲ, ಫೆಬ್ರವರಿ 05: ಬೆಂಗಳೂರಲ್ಲಿ ರೋಡ್​​ ರೇಜ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಸಣ್ಣಪುಟ್ಟ ಕಾರಣಗಳಿಗೂ ಸವಾರರು ರೌಡಿಸಂ ಪ್ರದರ್ಶಿಸುತ್ತಿದ್ದಾರೆ. ನೆಲಮಂಗಲದಿಂದ ಕೆಲಸಕ್ಕೆ ತೆರಳುತ್ತಿದ್ದ ಆದಿತ್ಯ ಎಂಬುವವರ ಕಾರಿಗೆ ಮಾದಾವರ ಜಂಕ್ಷನ್ ಬಳಿ ಬೈಕ್ ಸವಾರನೊಬ್ಬ ಅಡ್ಡ ಹಾಕಿ ಕಿರಿಕ್ ತೆಗೆದಿದ್ದಾನೆ. ಬೈಕ್ ಸವಾರನು ಕಾರಿನ ಮಿರರ್ ಅನ್ನು ಮುರಿದು, ಆದಿತ್ಯ ಅವರನ್ನು ನಿಂದಿಸಿ ಬೆದರಿಕೆಯನ್ನೂ ಹಾಕಿದ್ದಾನೆ. ಈ ಘಟನೆ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಚಾಲಕನ ಮೊಬೈಲ್​​ನಲ್ಲಿ ಘಟನೆ ರೆಕಾರ್ಡ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 05, 2026 02:08 PM
Follow Us
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More