ಬೆಂಗಳೂರಿನಲ್ಲಿ ಮುಂದುವರಿದ ರೋಡ್ ರೇಜ್: ನಡುರಸ್ತೆಯಲ್ಲೇ ಡ್ಯಾಗರ್ ಹಿಡಿದು ಸವಾರನ ಪುಂಡಾಟ, ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗುರುವಾರ ಸಂಜೆ ಲಿಂಗರಾಜಪುರ ಫ್ಲೈಓವರ್ ಕೆಳಗೆ ನಡೆದ ರೋಡ್ರೇಜ್ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬೈಕ್ ಸವಾರನೊಬ್ಬ ದಾರಿ ಬಿಡಲಿಲ್ಲ ಎಂದು ಎಂದು ಅಟ್ಟಹಾಸ ಮೆರೆದಿದ್ದಲ್ಲದೆ, ಗೂಡ್ಸ್ ವಾಹನದ ಗಾಜು ಒಡೆದು ಹಾನಿಮಾಡಿದ್ದಾನೆ.
ಬೆಂಗಳೂರು, ಸೆಪ್ಟೆಂಬರ್ 5: ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ಮರುಕಳಿಸುತ್ತಿವೆ. ದಾರಿ ಬಿಡಲಿಲ್ಲ ಎಂದು ಬೈಕ್ ಸವಾರನೊಬ್ಬ ಪುಂಡಾಟ ಮೆರೆದಿದ್ದಾನೆ. ನಡುರಸ್ತೆಯಲ್ಲೇ ಡ್ಯಾಗರ್ ಹಿಡಿದು ಅಟ್ಟಹಾಸ ಮೆರೆದಿದ್ದಲ್ಲದೆ, ಗೂಡ್ಸ್ ವಾಹನದ ಗ್ಲಾಸ್ ಒಡೆದು ದಾಂಧಲೆ ಎಬ್ಬಿಸಿದ್ದಾನೆ. ಬೆಂಗಳೂರಿನ ಲಿಂಗರಾಜಪುರ ಫ್ಲೈಓವರ್ ಕೆಳಗೆ ಗುರುವಾರ ಸಂಜೆ ನಡೆದ ಗಲಾಟೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 05, 2025 07:30 AM