ಬೆಂಗಳೂರು: ಇಡ್ಲಿಯಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆ ಬಳಿಕ ಹೋಟೆಲ್ ಮಾಲೀಕ ಶಾಕಿಂಗ್ ರಿಯಾಕ್ಷನ್

| Updated By: Ganapathi Sharma

Updated on: Feb 28, 2025 | 9:59 AM

ಇಡ್ಲಿ ತಯಾರಿಗೆ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿದ್ದುದು ನಿಜ. ಆದರೆ, ಅದು ಮಾಹಿತಿ ಕೊರತೆಯಿಂದ ಆಗಿತ್ತು. ಅದರಿಂದಾಗಿ ಇಡ್ಲಿಯಲ್ಲಿ ಕ್ಯಾನ್ಸರ್​​ಕಾರಕ ಅಂಶ ಇದೆ ಎಂದು ಗೊತ್ತಾದ ಕೂಡಲೇ ಇಂದಿನಿಂದಲೇ ಅದನ್ನು ತೆಗೆದು ಬಿಸಾಡಿದ್ದೇವೆ. ಬಟ್ಟೆಯ ಹಾಳೆ ಮತ್ತು ಇಡ್ಲಿಗೆಂದೇ ಪ್ರತ್ಯೇಕ ಪಾತ್ರೆ ತರಿಸುತ್ತಿದ್ದೇನೆ ಎಂದು ಹೋಟೆಲ್​ ಮಾಲೀಕರೊಬ್ಬರು ಟಿವಿ9 ಗೆ ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 28: ಇಡ್ಲಿಯಲ್ಲಿ ಕ್ಯಾನ್ಸರ್​ಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ಶುಕ್ರವಾರ ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಇಡ್ಲಿ ತಯಾರಿ ವಿಧಾನದ ಬಗ್ಗೆ ತಪಾಸಣೆ ನಡೆಸಿದ್ದಾರೆ. ಈ ಮಧ್ಯೆ, ಇಡ್ಲಿ ತಯಾರಿಸುವುದಕ್ಕೆ ಪ್ಲಾಸ್ಟಿಕ್ ಹಾಳೆ ಬಳಸುತ್ತಿದ್ದ ಬಗ್ಗೆ ಹೋಟೆಲ್ ಮಾಲೀಕರೊಬ್ಬರು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಆದರೆ, ಅರಿವು ಇಲ್ಲದೆ ಆಗಿರುವ ಕೆಲಸ ಅದು ಎಂದು ಅವರು ಹೇಳಿದ್ದು, ತಕ್ಷಣದಿಂದಲೇ ಬಟ್ಟೆಯನ್ನು ಮಾತ್ರ ಬಳಸುವುದಾಗಿ ಹೇಳಿದ್ದಾರೆ. ಮಾತಿನ ಪೂರ್ಣ ವಿವರಗಳಿಗೆ ವಿಡಿಯೋ ನೋಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ