ಆಫ್ರಿಕಾದಿಂದ ಬಂದ ಚೀತಾಗಳು ಹೇಗಿವೆ ನೋಡಿ!

Edited By:

Updated on: Apr 18, 2026 | 12:38 PM

ದಕ್ಷಿಣ ಆಫ್ರಿಕಾದಿಂದ ತರಲಾಗಿರುವ ನಾಲ್ಕು ಚೀತಾಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ಆಗಮಿಸಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಡರಾತ್ರಿ ತರಲಾಗಿರುವ ಈ ಎರಡು ಗಂಡು ಹಾಗೂ ಎರಡು ಹೆಣ್ಣು ಚೀತಾಗಳನ್ನು 40 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ.

ಬೆಂಗಳೂರು, ಏಪ್ರಿಲ್ 18: ದಕ್ಷಿಣ ಆಫ್ರಿಕಾದಿಂದ ತರಲಾಗಿರುವ ನಾಲ್ಕು ಚೀತಾಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರಕ್ಕೆ ಸುರಕ್ಷಿತವಾಗಿ ಆಗಮಿಸಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಡರಾತ್ರಿ ತರಲಾಗಿರುವ ಈ ಎರಡು ಗಂಡು ಹಾಗೂ ಎರಡು ಹೆಣ್ಣು ಚೀತಾಗಳನ್ನು 40 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ.

ಉದ್ಯಾನವನದ ವೈದ್ಯರ ನಿಗಾದಲ್ಲಿ ಅವುಗಳ ಆರೋಗ್ಯ ಮತ್ತು ಚಲನವಲನಗಳನ್ನು ನಿಗಾ ವಹಿಸಲಾಗುತ್ತಿದೆ. ಈ ಅವಧಿ ಬಳಿಕ ತಜ್ಞರ ಪರಿಶೀಲನೆ ನಡೆಸಿ, ಚೀತಾಗಳು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಬಳಿಕ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಸದ್ಯ ಚೀತಾಗಳು ಪುನರ್ವಸತಿ ಕೇಂದ್ರದ ಕ್ವಾರಂಟೈನ್ ಪಂಜರದಲ್ಲಿ ಸುರಕ್ಷಿತವಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us