Loading video

ಕಲ್ಲಂಗಡಿ ಹಣ್ಣು ಖರೀದಿಸುವ ಮೊದಲು ಒಂದು ಸಿಂಪಲ್ ಟೆಸ್ಟ್ ಮಾಡಿ ರಾಸಾಯನಿಕ ಮಿಶ್ರಿತವೋ ಅಲ್ಲವೋ ಅಂತ ತಿಳಿದುಕೊಳ್ಳಿ

|

Updated on: Feb 28, 2025 | 5:14 PM

ಸಾಮಾನ್ಯವಾಗಿ ಕಲ್ಲಂಗಡಿ ಮಾರಾಟಗಾರರು ಕಡುಗೆಂಪಗಿನ ಕಲ್ಲಂಗಡಿ ಹಣ್ಣಿನ ತುಂಡನ್ನು ಗ್ರಾಹಕರಿಗೆ ಕಾಣುವಂತೆ ಇಟ್ಟಿರುತ್ತಾರೆ. ಹಣ್ಣು ಹೆಚ್ಚು ಕೆಂಪಾಗಲು ಅದರಲ್ಲಿ ಕೆಮಿಕಲ್ ಇಂಜೆಕ್ಟ್ ಮಾಡಲಾಗಿರುತ್ತದೆ ಅಂತ ಪಾಪ ಅವರಿಗೇನು ಗೊತ್ತು. ಅಸಲಿಗೆ ಇಡ್ಲಿ, ಬಟಾಣಿ, ಲಿಪ್ ಸ್ಟಿಕ್ ಮೊದಲಾದವುಗಳಲ್ಲಿ ಕೆಮಿಕಲ್ ಬೆರೆತಿರುತ್ತೆ ಎಂಬ ಅಂಶ ಈಗಷ್ಟೇ ಬೆಳಕಿಗೆ ಬಂದಿದೆ. ಗ್ರಾಹಕರು ಖರೀದಿಸುವ ಮೊದಲು ಇಂಥದೊಂದು ಸಿಂಪಲ್ ಟೆಸ್ಟ್ ಮಾಡಿದರೆ ತಪ್ಪೇನೂ ಇಲ್ಲ.

ಬೆಂಗಳೂರು, ಫೆ 28 : ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ಕಲಬೆರಕೆ ಪ್ರಧಾನವಾಗಿರುವ ಇವತ್ತಿನ ದಿನಗಳಲ್ಲಿ ಕಲ್ಲಂಗಡಿ ಹಣ್ಣು ಸಹ ವಿಷಕಾರಿ ರಾಸಾಯನಿಕಗಳಿಂದ (toxic chemicals) ಮುಕ್ತವಲ್ಲ ಅಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿರುವುದರಿಂದ ಹಣ್ಣನ್ನು ಸೇವಿಸುವ ಮೊದಲು ಒಂದು ಟೆಸ್ಟ್ ನಡೆಸುವುದು ಬಹಳ ಮುಖ್ಯ. ನಮ್ಮ ಬೆಂಗಳೂರು ಪ್ರತಿನಿಧಿ ಕಲ್ಲಂಗಡಿ ಮಾರಾಟ ಮಾಡುವ ರಸ್ತೆಬದಿಯ ಅಂಗಡಿಯೊಂದಕ್ಕೆ ತೆರಳಿ ಅಲ್ಲಿ ಸಿಗುವ ಕಲ್ಲಂಗಡಿ ಕೆಮಿಕಲ್ ಮಿಶ್ರಿತವೋ ಇಲ್ಲವೋ ಅನ್ನೋದನ್ನು ಡೆಮೋ ಮಾಡಿದ್ದಾರೆ. ಕಲ್ಲಂಗಡಿ ಹಣ್ಣಿನ ಮೇಲೆ ಅಂದರೆ ಕೆಂಪಗಿರುವ ಒಳಭಾಗದ ಮೇಲೆ ಟಿಶ್ಯೂ ಪೇಪರ್ ಇಟ್ಟಾಗ ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಅದು ರಾಸಾಯನಿಕ ಮಿಶ್ರಿತ ಅನ್ನೋದು ಸಾಬೀತಾಗುತ್ತದೆ. ಹಾಗಾಗಿ ಕೆಂಬಣ್ಣ ನೋಡಿ ಮೋಸ ಹೋಗಬೇಡಿ. ಬೆಳ್ಳಗಿರೋದೆಲ್ಲ ಹಾಲಲ್ಲ, ಒಳಗಡೆ ಕೆಂಪಗಿರೋದೆಲ್ಲ ರಾಸಾಯನಿಕ ಮಿಶ್ರಿತವಲ್ಲದ ಕಲ್ಲಂಗಡಿ ಹಣ್ಣಲ್ಲ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Mushrooms: ವಿಷಕಾರಿಯಲ್ಲದ ಅಣಬೆಗಳನ್ನು ಸುರಕ್ಷಿತವಾಗಿ ಆರಿಸುವುದು ಹೇಗೆ?