ಭದ್ರಾವತಿ: ಎಡಿಜಿಪಿ ಅಲೋಕ್ ಕುಮಾರ ನೇತೃತ್ವದಲ್ಲಿ ಪಟ್ಟಣದ ಬೀದಿಗಳ ಮೂಲಕ ಪೊಲೀಸ್ ಪಥಸಂಚಲನ

Edited By:

Updated on: Aug 17, 2022 | 2:25 PM

ಪೊಲೀಸ್ ಪರೇಡ್ ಬಳಿಕ ಅಂಗಡಿ ಮುಂಗಟ್ಟುಗಳು ಕ್ರಮೇಣ ತೆರೆದುಕೊಳ್ಳಲಾರಂಭಿಸಿದವು.

ಶಿವಮೊಗ್ಗ: ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಗಲಭೆಗ್ರಸ್ಥ ಪೇಪರ್ ಟೌನ್ ಭದ್ರಾವತಿಯಲ್ಲಿ (Bhadravati) ಸ್ಥಿತಿ ಸಹಜಗೊಳಿಸಲು ಮತ್ತು ಆತಂಕದಲ್ಲಿರುವ ಜನರಲ್ಲಿ ವಿಶ್ವಾಸ ಮೂಡಿಸಲು ಬುಧವಾರ ಬೆಳಗ್ಗೆ ಪಟ್ಟಣದ ಬೀದಿಗಳಲ್ಲಿ ಶಿವಮೊಗ್ಗ ಮತ್ತು ಸ್ಥಳೀಯ ಪೊಲೀಸ್ ಹಾಗೂ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ನೊಂದಿಗೆ ಪಥ ಸಂಚಲನ (parade) ನಡೆಸಿದರು. ಪೊಲೀಸ್ ಪರೇಡ್ ಬಳಿಕ ಅಂಗಡಿ ಮುಂಗಟ್ಟುಗಳು ಕ್ರಮೇಣ ತೆರೆದುಕೊಳ್ಳಲಾರಂಭಿಸಿದವು.