ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ವಿಶ್ವವಿಖ್ಯಾತ ದಸರಾಗೆ ದಿನಗಣನೆ ಶುರುವಾಗಿದ್ದು, ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ರಿಗೆ (Banu Mushtaq) ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ. ಹಾಸನ (Hasaan) ನಗರದ ಅಮಿರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ದಸರಾ ವಿಶೇಷಧಿಕಾರಿ ಆಗಿರುವ ಮೈಸೂರು ಡಿಸಿ ಲಕ್ಷ್ಮಿಕಾಂತರೆಡ್ಡಿ ಹಾಗೂ ಎಡಿಸಿ ಶಿವರಾಜ್ ಅವರು ತೆರಳಿದ್ದರು. ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಆನೆ ವಿಗ್ರಹದ ಜೊತೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಇನ್ನು ಬಾನು ಮುಸ್ತಾಕ್ ಅವರ ಮನೆಯಲ್ಲಿ ಕುರಾನ್ ಜತೆಗೆ ಭಗವದ್ಗೀತೆ ಇರುವುದು ಕಂಡುಬಂದಿದ್ದು. ಹಿಂದೂ ದೇವರಗಳ ಮೇಲೆ ನಂಬಿಕೆ ಇಲ್ಲದವರಿಂದ ಅದು ಹೇಗೆ ದಸರಾ ಉದ್ಘಾಟಿಸುತ್ತಾರೆ ಅಂತೆಲ್ಲಾ ವಿರೋಧಗಳು ವ್ಯಕ್ತವಾಗಿವೆ. ಇದರ ನಡುವೆ ಬಾನು ಮುಸ್ತಾಕ್ ಮನೆಯಲ್ಲಿ ಭಗವದ್ಗೀತೆ ಇಟ್ಟುಕೊಂಡಿರುವು ಎಲ್ಲರ ಗಮನಸೆಳೆದಿದೆ.
ಹಾಸನ, (ಸೆಪ್ಟೆಂಬರ್ 03): ವಿಶ್ವವಿಖ್ಯಾತ ದಸರಾಗೆ ದಿನಗಣನೆ ಶುರುವಾಗಿದ್ದು, ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ರಿಗೆ (Banu Mushtaq) ಸರ್ಕಾರದಿಂದ ಅಧಿಕೃತ ಆಹ್ವಾನ ನೀಡಲಾಗಿದೆ. ಹಾಸನ (Hasaan) ನಗರದ ಅಮಿರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ್ ಅವರ ನಿವಾಸಕ್ಕೆ ದಸರಾ ವಿಶೇಷಧಿಕಾರಿ ಆಗಿರುವ ಮೈಸೂರು ಡಿಸಿ ಲಕ್ಷ್ಮಿಕಾಂತರೆಡ್ಡಿ ಹಾಗೂ ಎಡಿಸಿ ಶಿವರಾಜ್ ಅವರು ತೆರಳಿದ್ದರು. ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಆನೆ ವಿಗ್ರಹದ ಜೊತೆ ಆಹ್ವಾನ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಇನ್ನು ಬಾನು ಮುಸ್ತಾಕ್ ಅವರ ಮನೆಯಲ್ಲಿ ಕುರಾನ್ ಜತೆಗೆ ಭಗವದ್ಗೀತೆ ಇರುವುದು ಕಂಡುಬಂದಿದ್ದು. ಹಿಂದೂ ದೇವರಗಳ ಮೇಲೆ ನಂಬಿಕೆ ಇಲ್ಲದವರಿಂದ ಅದು ಹೇಗೆ ದಸರಾ ಉದ್ಘಾಟಿಸುತ್ತಾರೆ ಅಂತೆಲ್ಲಾ ವಿರೋಧಗಳು ವ್ಯಕ್ತವಾಗಿವೆ. ಇದರ ನಡುವೆ ಬಾನು ಮುಸ್ತಾಕ್ ಮನೆಯಲ್ಲಿ ಭಗವದ್ಗೀತೆ ಇಟ್ಟುಕೊಂಡಿರುವು ಎಲ್ಲರ ಗಮನಸೆಳೆದಿದೆ.
