ಜನಾರ್ದನ ರೆಡ್ಡಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: ಕಾಂಗ್ರೆಸ್​​ ಶಾಸಕ ಹೇಳಿದ್ದೇ

Edited By:

Updated on: Jan 02, 2026 | 11:28 AM

ಬ್ಯಾನರ್​​ ವಿಚಾರಕ್ಕೆ ಬಳ್ಳಾರಿಯಲ್ಲಿ ನಡೆದ ಗಲಾಟೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ. ಈ ಘಟನೆಗೆ ಜನಾರ್ದನ ರೆಡ್ಡಿ ಅವರೇ ಕಾರಣ ಎಂದು ಭರತ್ ರೆಡ್ಡಿ ಆರೋಪಿಸಿದ್ದಾರೆ. ಜೊತೆಗೆ ಗಂಗಾವತಿ ಶಾಸಕನಿಗೆ ಓಪನ್​​ ಚಾಲೆಂಜ್​​ ಹಾಕಿರುವ ಭರತ್​​, ಅವರನ್ನು ಈಗಾಗಲೇ ರಾಜಕೀಯವಾಗಿ ಮುಗಿಸಿದ್ದೇನೆ. ಅವರ ಬಣ್ಣವನ್ನು ಜನರ ಮುಂದೆ ಬಯಲು ಮಾಡ್ತೀನಿ ಎಂದಿದ್ದಾರೆ.

ಬಳ್ಳಾರಿ, ಜನವರಿ 02: ಬ್ಯಾನರ್​​ ವಿಚಾರಕ್ಕೆ ನಡೆದ ಗಲಾಟೆ ತೀವ್ರ ರೂಪಕ್ಕೆ ಹೋಗಿ ಓರ್ವ ಯುವಕ ಸಾವನ್ನಪ್ಪಿರುವ ಬಗ್ಗೆ ನಾರಾ ಭರತ್ ರೆಡ್ಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ತಮ್ಮ ವಿರೋಧಿಗಳ ಗುಂಪಿನಿಂದಲೇ ಗುಂಡು ಹಾರಿಸಲಾಗಿದೆ. ಯುವಕನ ಸಾವಿಗೆ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಮೃತಪಟ್ಟ ಯುವಕನ ತ್ಯಾಗವು ವಾಲ್ಮೀಕಿ ಅಜ್ಜನ ಉದ್ದೇಶಗಳಿಗಾಗಿ ಮತ್ತು ಜನಾರ್ದನ ರೆಡ್ಡಿ ರಾಜಕೀಯ ಅಂತ್ಯಕ್ಕಾಗಿ ಆಗಿದೆ. ಜನಾರ್ದನ ರೆಡ್ಡಿ ಎಂತಹ ಹೇಡಿ ಮತ್ತು ಅವರು ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಜನರಿಗೆ ತೋರಿಸುತ್ತೇನೆ ಎಂದು ಈ ವೇಲೆ ಭರತ್​​ ರೆಡ್ಡಿ ಶಪಥನ ಕೂಡ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.