ಪ್ರಜ್ವಲ್​ನನ್ನು ಮಾತಾಡಿಸಲು ಜೈಲಿಗೆ ಬಂದ ಭವಾನಿ ರೇವಣ್ಣ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!

|

Updated on: Jul 01, 2024 | 6:40 PM

ಗಾಯದ ಮೇಲೆ ಬರೆ ಎಂಬಂತೆ ಭವಾನಿ ರೇವಣ್ಣರ ಹಿರಿಮಗ ಮತ್ತು ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ ಸಹ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಅನೈಸರ್ಗಿಕ ಲೈಂಗಿಕ ಅತ್ಯಾಚಾರ ನಡೆಸಿರುವ ಅರೋಪದಲ್ಲಿ ಜೈಲು ಸೇರಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಭವಾನಿ ಮಾಧ್ಯಮಗಳ ಜೊತೆ ಏನು ತಾನೇ ಮಾತಾಡಿಯಾರು?

ಅನೇಕಲ್ (ಬೆಂಗಳೂರು): ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣರ ಸ್ಥಿತಿ ನೋಡಿದರೆ ಮರುಕ ಹುಟ್ಟುತ್ತದೆ. ಅವರ ಮೇಲೆ ಅರೋಪಗಳೇನೇ ಇದ್ದರೂ ಅವರೊಬ್ಬ ಮಹಿಳೆ ಮತ್ತು ಈಗ ಜೈಲಲ್ಲಿರುವ ಇಬ್ಬರು ಮಕ್ಕಳ ತಾಯಿ ಅನ್ನೋದನ್ನು ಮರೆಯಬಾರದು. ಅವರು ಮತ್ತು ರೇವಣ್ಣ ಸಹ ಜಾಮೀನು ಪಡೆದು ಜೈಲು ಸೇರುವುದನ್ನು ತಪ್ಪಿಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ನಡೆಸಿರುವ ಆರೋಪದ ಪೆನ್ ಡ್ರ್ವೈವ್ ಗಳು ಸಾರ್ವಜನಿಕಗೊಂಡ ದಿನದಿಂದ ಭವಾನಿ ರೇವಣ್ಣ ಮಾಧ್ಯಮದವರೊಂದಿಗೆ ಮಾತಾಡುತ್ತಿಲ್ಲ. ಇನ್ ಫ್ಯಾಕ್ಟ್, ಕೆಮೆರಾಗಳನ್ನು ನೋಡಿದಾಕ್ಷಣ ತಪ್ಪಿಸಿಕೊಳ್ಳುತ್ತಾರೆ ಇಲ್ಲವೇ ಮುಖ ಮುಚ್ಚಿಕೊಳ್ಳುತ್ತಾರೆ. ಇವತ್ತು ಪ್ರಜ್ವಲ್ ರೇವಣ್ಣನನ್ನು ನೋಡಲು ಅವರು ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಗೆ ಬಂದಾಗಲೂ ಮಾಧ್ಯಮಮಗಳ ಕೆಮೆರಾ ಕಂಡು ಮುಖ ಮುಚ್ಚಿಕೊಂಡರು. ಅವರು ಇತ್ತೀಚಿಗೆ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಬಗ್ಗೆ ನಾವು ವರದಿ ಮಾಡಿದ್ದು ನಡೆದಾಡಲು ಈಗ ಸ್ಟಿಕ್ಕೊಂದನ್ನು ಬಳಸುತ್ತಿದ್ದಾರೆ. ಅದನ್ನು ಕಾರಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಪಹರಣ ಪ್ರಕರಣ: ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಕೊನೆಗೂ ಅರೆಸ್ಟ್