AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ

ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ

ರಾಜೇಶ್ ದುಗ್ಗುಮನೆ
|

Updated on:Oct 15, 2026 | 10:41 AM

Share

ಕರ್ನಾಟಕದ ಬೀದರ್ ಮೂಲದ ಪ್ರತಿಭಾವಂತ ಗಾಯಕಿ ಶಿವಾನಿ ಸ್ವಾಮಿ ಹಿಂದಿ ‘ಸರಿಗಮಪ’ ರಿಯಾಲಿಟಿ ಶೋನಲ್ಲಿ ಮರಾಠಿಯ ‘ಅಪ್ಸರಾ ಆಲಿ’ ಹಾಡು ಹಾಡಿ ತೀರ್ಪುಗಾರರನ್ನು ಬೆರಗುಗೊಳಿಸಿದ್ದಾರೆ. ಈ ಹಿಂದೆ ಜೀ ಕನ್ನಡ ಸರಿಗಮಪ ವಿಜೇತೆಯಾಗಿದ್ದ ಶಿವಾನಿ, ತಮ್ಮ ಅದ್ಭುತ ಧ್ವನಿಯ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಾ ಕರುನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.

ಕರ್ನಾಟಕದ ಬೀದರ್ ಮೂಲದ ಪ್ರತಿಭಾವಂತ ಗಾಯಕಿ ಶಿವಾನಿ ಸ್ವಾಮಿ ತಮ್ಮ ಅದ್ಭುತ ಧ್ವನಿ ಮತ್ತು ಗಾಯನದಿಂದ ರಾಷ್ಟ್ರಮಟ್ಟದಲ್ಲಿ ಕನ್ನಡದ ಹೆಸರನ್ನು ಎತ್ತಿಹಿಡಿದಿದ್ದಾರೆ. ಅವರು ಈಗ ದೇಶದ ಅತ್ಯಂತ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಆದ ಹಿಂದಿಯ ‘ಸರಿಗಮಪ’ ವೇದಿಕೆಯಲ್ಲಿ ತಮ್ಮ ಗಾಯನದ ಜಾದು ತೋರುತ್ತಿದ್ದಾರೆ. ಅವರ ಈ ಸಾಧನೆಯಿಂದ ಇಡೀ ಕರ್ನಾಟಕದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದ್ದು, ಸಂಗೀತ ಪ್ರಿಯರು ಭರ್ಜರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮರಾಠಿಯ ‘ಅಪ್ಸರಾ ಆಲಿ’ ಹಾಡನ್ನು ಅವರು ಹಾಡಿದ್ದಾರೆ. ಅವರ ಹಾಡನ್ನು ಕೇಳಿ ಎಲ್ಲರೂ ತಲೆಬಾಗಿದ್ದಾರೆ. ಜಡ್ಜ್​​ಗಳು ಒಮ್ಮೆ ಶಾಕ್ ಆಗಿದ್ದಾರೆ. ಕುಮಾರಿ ಸ್ವಾಮಿ ಈ ಹಿಂದೆ ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ ‘ಸರಿಗಮಪ’ದಲ್ಲಿ ವಿಜೇತೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತಮ್ಮ ಶ್ರಮ ಮತ್ತು ಅದ್ಭುತ ಗಾಯನ ಪ್ರತಿಭೆಯಿಂದ ಸಂಗೀತ ಲೋಕದಲ್ಲಿ ತಮ್ಮದೇ ಆದ ವಿಶೇಷ ಗುರುತು ಮೂಡಿಸಿಕೊಂಡಿದ್ದಾರೆ.

ಹಿಂದಿಯ ಈ ಮಹತ್ವದ ವೇದಿಕೆಯಲ್ಲಿ ಶಿವಾನಿ ತಮ್ಮ ಮಧುರ ಗಾಯನದ ಮೂಲಕ ದೇಶಾದ್ಯಂತ ಇರುವ ಸಂಗೀತ ಪ್ರಿಯರ ಹಾಗೂ ತೀರ್ಪುಗಾರರ ಮನಗೆಲ್ಲುತ್ತಿದ್ದಾರೆ. ಇವರ ಈ ಯಶಸ್ಸಿನ ಪಯಣವು ಮುಂದಿನ ದಿನಗಳಲ್ಲಿ ಕರುನಾಡಿನ ಹಲವಾರು ಯುವ ಪ್ರತಿಭೆಗಳಿಗೆ ದೊಡ್ಡ ಪ್ರೇರಣೆಯಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 15, 2026 10:39 AM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More