‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ರಂಪಾಟ: ಗಂಭೀರ ಆರೋಪ ಮಾಡಿದ ಸ್ಪರ್ಧಿ
'ಬಿಗ್ ಬಾಸ್ ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಸ್ಪರ್ಧಿ ಪೂರ್ಣಿಮಾ ಶೋ ಹಾಗೂ ನಿರ್ಣಾಯಕರ ವಿರುದ್ಧವೇ ಪಕ್ಷಪಾತದ ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ಕೋಪಗೊಂಡ ನಿರ್ಣಾಯಕರಾದ ವಿನಯ್ ಗೌಡ, ಶೋ ಮೇಲೆ ನಂಬಿಕೆ ಇಲ್ಲದಿದ್ದರೆ ತಕ್ಷಣ ವಾಕ್ ಔಟ್ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದ್ದು, ವೇದಿಕೆಯಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ.
ಕಲರ್ಸ್ ಕನ್ನಡದ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಭಾರಿ ಕಾವೇರುತ್ತಿದ್ದು, ಇದೀಗ ಸ್ಪರ್ಧಿ ಪೂರ್ಣಿಮಾ ಹಾಗೂ ನಿರ್ಣಾಯಕರ ನಡುವೆ ನಡದಿರುವ ಸಂಘರ್ಷ ವೇದಿಕೆಯಲ್ಲಿ ತೀವ್ರ ಗೊಂದಲ ಮತ್ತು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ವೇದಿಕೆಯಲ್ಲಿ ನಡೆದಿದ್ದೇನು?
ಎಲಿಮಿನೇಷನ್ ಭೀತಿಯ ಕ್ಷಣದಲ್ಲಿ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ಪೂರ್ಣಿಮಾ ಶೋ ಹಾಗೂ ಎಲಿಮಿನೇಷನ್ ಪ್ರಕ್ರಿಯೆಯ ಕುರಿತು ಗಂಭೀರ ಆರೋಪಗಳನ್ನು ಮಾಡಿದರು. ‘ನನ್ನನ್ನೇ ಮನೆಯಿಂದ ಕಳುಹಿಸಲು ಮೊದಲೇ ಫಿಕ್ಸ್ ಆಗಿದೆ. ಹೈಟ್, ಸ್ಮಾರ್ಟ್, ಬ್ಯೂಟಿ ಇರುವವರನ್ನು ಮಾತ್ರ ಉಳಿಸಿಕೊಂಡು ನನ್ನಂತಹವರನ್ನು ಎಲಿಮಿನೇಟ್ ಮಾಡಲಾಗುತ್ತಿದೆ’ ಎಂದು ವೀಕ್ಷಕರು ಹಾಗೂ ನಿರ್ಣಾಯಕರ ನಿರ್ಧಾರವನ್ನು ಬಹಿರಂಗವಾಗಿಯೇ ಪ್ರಶ್ನಿಸಿದರು. ಅಲ್ಲದೆ, ‘ಕ್ಯಾಮೆರಾ ಆಫ್ ಮಾಡಿ’ ಎಂದು ಗಟ್ಟಿಯಾಗಿ ಕಿರುಚಾಡಿ ಶೋ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ ಎಂಬರ್ಥದಲ್ಲಿ ಗಂಭೀರ ಆರೋಪ ಮಾಡಿದರು.
ನಿರ್ಣಾಯಕರ ತೀವ್ರ ಆಕ್ರೋಶ
ಪೂರ್ಣಿಮಾ ಅವರ ಈ ನಿರ್ಧಾರ ಹಾಗೂ ಆರೋಪಕ್ಕೆ ವೇದಿಕೆಯಲ್ಲಿದ್ದ ಜಡ್ಜ್ಗಳು ಆಕ್ರೋಶ ಹೊರಹಾಕಿದರು. ‘ನೀವು ಮಾಡುತ್ತಿರುವ ಸ್ಟೇಟ್‌ಮೆಂಟ್ ಎಷ್ಟು ಕೆಟ್ಟದಾಗಿ ಕೇಳಿಸುತ್ತಿದೆ ಗೊತ್ತಾ? ಈ ಶೋ ಮತ್ತು ನಿರ್ಣಯಗಳ ಮೇಲೆ ನಂಬಿಕೆ ಇಲ್ಲದಿದ್ದರೆ ದಯವಿಟ್ಟು ಇಲ್ಲಿಂದ ವಾಕ್ ಔಟ್ ಮಾಡಿ’ ಎಂದು ಗರಂ ಆಗಿ ಎಚ್ಚರಿಕೆ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 29, 2026 09:33 AM
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಮೋಸ ಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಗನ್ ಚಿನ್ನಪ್ಪ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಫ್ಲೈಓವರ್ನಿಂದ ಕೆಳಗೆ ಬಿದ್ದ ಕಾರು

