AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಅಂತಿಮ ಕದನದಲ್ಲಿ ಗೆಲ್ಲೋರ್ಯಾರು?

ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಅಂತಿಮ ಕದನದಲ್ಲಿ ಗೆಲ್ಲೋರ್ಯಾರು?

ರಾಜೇಶ್ ದುಗ್ಗುಮನೆ
|

Updated on:Sep 02, 2026 | 1:24 PM

Share

ಸಾಮಾನ್ಯರನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ 'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ. ಕಠಿಣ ಪರೀಕ್ಷೆಗಳನ್ನು ದಾಟಿ ಬಂದ ಅಂತಿಮ ವಾರದ ಸ್ಪರ್ಧಿಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದ್ದು, ಈ ಶನಿವಾರ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಫಿನಾಲೆ ಪ್ರಸಾರವಾಗಲಿದೆ.

ಸಾಮಾನ್ಯರನ್ನು ಬಿಗ್ ಬಾಸ್ ಮನೆಗೆ ಕಳುಹಿಸುವ ಕನಸಿನೊಂದಿಗೆ ಆರಂಭವಾಗಿದ್ದ ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೊದಲ ಸೀಸನ್ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಹಲವು ಕಠಿಣ ಸವಾಲುಗಳು, ಕಟ್ಟುನಿಟ್ಟಿನ ತೀರ್ಪುಗಾರರ ವಿಮರ್ಶೆ ಹಾಗೂ ನಿರಂತರ ಪರೀಕ್ಷೆಗಳನ್ನು ಎದುರಿಸಿ ಬಂದಿರುವ ಅಂತಿಮ ವಾರದ ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆ ರೇಸ್‌ನಲ್ಲಿ ಮುಖಾಮುಖಿಯಾಗಿದ್ದಾರೆ.

ನಾಲ್ವರು ಜೂರಿಗಳ ಕಠಿಣ ನಿರ್ಧಾರಗಳ ನಡುವೆ ತಮ್ಮ ಪ್ರತಿಭೆ ಪ್ರದರ್ಶಿಸಿ ಗೆದ್ದು ಬಂದಿರುವ ಈ ಸ್ಪರ್ಧಿಗಳಲ್ಲಿ ಯಾರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ. ಈ ಮಹಾ ಸಂಗ್ರಾಮದ ‘ಗ್ರ್ಯಾಂಡ್ ಫಿನಾಲೆ’ ಈ ಶನಿವಾರ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಜಿಯೋ ಹಾಟ್‌ಸ್ಟಾರ್‌ನಲ್ಲೂ ವೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 02, 2026 01:23 PM

Follow Us