ಹಣ ಕೊಟ್ಟು ದಿನಸಿ ಪಡೆಯಲು ಬಿಗ್ ಬಾಸ್ ಅವಕಾಶ; ಮತ್ತೆ ದೊಡ್ಮನೆ ರಣರಂಗ

Updated on: Dec 22, 2023 | 9:54 AM

ಹೆಚ್ಚು ಹಣ ಇದ್ದವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ. ಈ ಹಣವನ್ನು ಬಳಕೆ ಮಾಡಿಕೊಂಡು ದಿನಸಿ ಪಡೆಯಲು ಬಿಗ್ ಬಾಸ್ ಅವಕಾಶ ನೀಡಿದ್ದರು. ಈ ವೇಳೆ ಕಿತ್ತಾಟ ಶುರುವಾಗಿದೆ.

ಬಿಗ್ ಬಾಸ್​ನಲ್ಲಿ ದಿನಸಿ ವಿಚಾರಕ್ಕೆ ಕಿತ್ತಾಟ ನಡೆಯುತ್ತದೆ. ಈ ವಾರ ಸ್ಪರ್ಧಿಗಳಿಗೆ ದಿನಸಿ ಆಯ್ಕೆ ಮಾಡಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿತ್ತು. ಆದರೆ, ಅಗತ್ಯ ವಸ್ತುಗಳನ್ನು ಪಡೆಯಲು ಅವರಿಂದ ಸಾಧ್ಯವಾಗಲೇ ಇಲ್ಲ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಣ ಚಾಲ್ತಿಗೆ ಬಂದಿದೆ. ಹೆಚ್ಚು ಹಣ ಇದ್ದವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ. ಈ ಹಣವನ್ನು ಬಳಕೆ ಮಾಡಿಕೊಂಡು ದಿನಸಿ ಪಡೆಯಲು ಬಿಗ್ ಬಾಸ್ (Bigg Boss) ಅವಕಾಶ ನೀಡಿದ್ದರು. ಈ ವೇಳೆ ಕಿತ್ತಾಟ ಶುರುವಾಗಿದೆ. ಕ್ಯಾಪ್ಟನ್ ಆಗಿ ಪಾಯಿಂಟ್ಸ್ ಕೊಡೋಕೆ ತನಿಷಾ ಒಪ್ಪಲಿಲ್ಲ. ಇದರಿಂದ ಜಗಳ ಶುರುವಾಗಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More