ಕಿಚ್ಚನ ಕೊನೇ ಪಂಚಾಯ್ತಿ; ಹೋಗೋರು ಯಾರು? ಉಳಿದುಕೊಳ್ಳೋರು ಯಾರು?
ವಿನಯ್ ಗೌಡ, ನಮ್ರತಾ ಗೌಡ, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಈ ಪೈಕಿ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ.
ಬಿಗ್ ಬಾಸ್ (Bigg Boss) ಫಿನಾಲೆ ಹಂತ ತಲುಪಿದೆ. ಇಂದು (ಜನವರಿ 20) ನಡೆಯೋದು ಈ ಸೀಸನ್ನ ಕೊನೆಯ ಪಂಚಾಯ್ತಿ. ಮುಂದಿನ ವಾರ ಅದ್ದೂರಿಯಾಗಿ ಫಿನಾಲೆ ನಡೆಯಲಿದೆ. ಈ ವಾರ ಐದು ಮಂದಿ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಒಬ್ಬರು ದೊಡ್ಮನೆಯಿಂದ ಹೋಗೋದು ಪಕ್ಕಾ. ಅದು ಯಾರು ಅನ್ನೋದು ಸದ್ಯದ ಕುತೂಹಲ. ವಿನಯ್ ಗೌಡ, ನಮ್ರತಾ ಗೌಡ, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಹಾಗೂ ಕಾರ್ತಿಕ್ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಈ ಪೈಕಿ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಆ ಮೂಲಕ ಸಂಖ್ಯೆ ಆರಕ್ಕೆ ಇಳಿಕೆ ಆಗಲಿದೆ. ಇಂದು ಕಲರ್ಸ್ ಕನ್ನಡದಲ್ಲಿ ಪಂಚಾಯ್ತಿ ಎಪಿಸೋಡ್ ಪ್ರಸಾರ ಕಾಣಲಿದೆ. 24 ಗಂಟೆ ಲೈವ್ ನೋಡಲು ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos