ಸುದೀಪ್ ಕುಳಿತುಕೊಂಡು ಯಾಕೆ ಬಿಗ್ ಬಾಸ್ ನಡೆಸಿಕೊಡಬಾರದು? ಅದಕ್ಕಿದೆ ಮಹತ್ವದ ಕಾರಣ
ಸುದೀಪ್ ಅವರು ಗಂಟೆಗಟ್ಟಲೆ ವೇದಿಕೆಯಲ್ಲಿ ನಿಂತುಕೊಂಡು ಬಿಗ್ ಬಾಸ್ ಕನ್ನಡ ನಡೆಸಿಕೊಡುತ್ತಾರೆ. ಅದು ಸುಲಭವಲ್ಲ. ಆ ಬಗ್ಗೆ ಫ್ಯಾನ್ಸ್ಗೆ ಕಾಳಜಿ ಇದೆ. ಈ ಕುರಿತು ಸುದ್ದಿಗೋಷ್ಠಿ ವೇಳೆ ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರಿಸಿದ್ದಾರೆ. ತಾವು ಯಾಕೆ ಕುಳಿತುಕೊಂಡು ಶೋ ನಿರೂಪಣೆ ಮಾಡಬಾರದು ಎಂಬುದನ್ನು ಅವರು ವಿವರಿಸಿದ್ದಾರೆ.
ಕಿಚ್ಚ ಸುದೀಪ್ (Kichcha Sudeep) ಅವರು ಗಂಟೆಗಟ್ಟಲೆ ನಿಂತುಕೊಂಡೇ ‘ಬಿಗ್ ಬಾಸ್ ಕನ್ನಡ’ (Bigg Boss Kannada) ಶೋ ನಡೆಸಿಕೊಡುತ್ತಾರೆ. ಅದು ಸುಲಭದ ಕೆಲಸ ಅಲ್ಲ. ಆ ಬಗ್ಗೆ ಅಭಿಮಾನಿಗಳಿಗೆ ಕಾಳಜಿ ಇದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಸುದೀಪ್ ಅವರು ಉತ್ತರ ನೀಡಿದ್ದಾರೆ. ತಾವು ಯಾಕೆ ಕುಳಿತುಕೊಂಡು ಶೋ ನಡೆಸಿಕೊಡಬಾರದು ಎಂಬುದನ್ನು ಸುದೀಪ್ (Sudeep) ವಿವರಿಸಿದ್ದಾರೆ. ‘ಕುಳಿತುಕೊಂಡು ಶೋ ನಡೆಸಿಕೊಟ್ಟರೆ ನಿರೂಪಕನ ವ್ಯಕ್ತಿತ್ವ ಬಿದ್ದು ಹೋಗುತ್ತದೆ. ನಾನು ಬೇಕಿದ್ದರೆ 2 ಸಂಚಿಕೆ ಕುಳಿತುಕೊಂಡು ಮಾಡುತ್ತೇನೆ. ಆಮೇಲೆ ದಯವಿಟ್ಟು ಬೇಡ ಅಂತ ನೀವೇ ಹೇಳುತ್ತೀರಿ’ ಎಂದಿದ್ದಾರೆ ಕಿಚ್ಚ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos