ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..

|

Updated on: Sep 13, 2024 | 10:57 PM

ಬಿಗ್​ ಬಾಸ್​ ರಿಯಾಲಿಟಿ ಶೋಗೆ ಹೋಗಿಬಂದ ರಕ್ಷಕ್​ ಬುಲೆಟ್​ ಅವರಿಗೆ ಟ್ರೋಲ್​ ಹೊಸದೇನೂ ಅಲ್ಲ. ಆ ರೀತಿ ಕಮೆಂಟ್​ ಮಾಡುವವರ ಬಗ್ಗೆ ಅವರೀಗ ತಮ್ಮ ಅನಿಸಿಕೆ ಏನು ಎಂಬುದನ್ನು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ರಕ್ಷಕ್​ ಬುಲೆಟ್​ ಅವರು ಮಾತನಾಡಿದ್ದಾರೆ. ಇದೇ ವೇದಿಕೆಯಲ್ಲಿ ಬಿಗ್​ ಬಾಸ್​ ಕಾರ್ಯಕ್ರಮದ ಮಾಜಿ ಸ್ಪರ್ಧಿಗಳು ಕೂಡ ಹಾಜರಿದ್ದರು.

‘ಕಮೆಂಟ್​ಗಳಿಂದ ನೆಗೆಟಿವಿಟಿ ಹರಡುತ್ತಿದೆ. ಅದರ ಬಗ್ಗೆ ನಾವು ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು. ನಾನಂತೂ ತಲೆ ಕೆಡಿಸಿಕೊಳ್ಳಲ್ಲ. ಜನರು ಕಮೆಂಟ್​ಗಳನ್ನು ಹಾಕಿದಾಗ ಅದನ್ನು ನೋಡಿ ಎಂಜಾಯ್​ ಮಾಡುತ್ತೇನೆ. ಅಂಥವರನ್ನು ನಾವು ಹಿಡಿಯೋಕೆ ಆಗಲ್ಲ. ಯಾಕೆಂದರೆ, ಅವರು ನಿಜವಾದ ಪ್ರೊಫೈಲ್​ನಿಂದ ಕಮೆಂಟ್​ ಹಾಕಲ್ಲ. ಡೈರೆಕ್ಟ್​ ಆಗಿ ಬಂದು ಕಮೆಂಟ್​ ಹಾಕಿ. ನಾವು ಕೂಡ ನಿಮ್ಮನ್ನು ನೋಡುತ್ತೇವೆ’ ಎಂದು ರಕ್ಷಕ್​ ಬುಲೆಟ್​ ಅವರು ಹೇಳಿದ್ದಾರೆ. ಇಶಾನಿಗೆ ಅವರು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.