ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 11 ರ ಶನಿವಾರದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್, ಈ ವಾರದ ಸ್ಪರ್ಧಿಗಳ ಪ್ರದರ್ಶನವನ್ನು ವಿಮರ್ಶೆ ಮಾಡಿದ್ದಾರೆ. ಉಗ್ರಂ ಮಂಜು, ಮೋಕ್ಷಿತಾ ಹಾಗೂ ಗೌತಮಿಯ ಆಟವನ್ನು ಪ್ರಶ್ನೆ ಮಾಡಿದ್ದಾರೆ.
ಬಿಗ್ಬಾಸ್ನಲ್ಲಿ ಮತ್ತೊಂದು ವೀಕೆಂಡ್ ಬಂದಿದೆ. ಮತ್ತೆ ಕಿಚ್ಚ ವೇದಿಕೆಗೆ ಬಂದಿದ್ದಾರೆ. ಈ ವಾರವೆಲ್ಲ ಮನೆಯಲ್ಲಿ ಮಹಾರಾಜ ಮತ್ತು ಮಹಾರಾಣಿಯರ ಆರ್ಭಟ ಜೋರಾಗಿತ್ತು. ಪ್ರಜಾ ಪಾಲನೆ ಮಾಡಲಿ ಎಂಬ ಉದ್ಧೇಶದಿಂದ ಉಗ್ರಂ ಮಂಜು ಅವರನ್ನು ಮಹಾರಾಜರನ್ನಾಗಿಯೂ ಮೋಕ್ಷಿತಾ ಅನ್ನು ಮಹಾರಾಣಿಯನ್ನಾಗಿಯೂ ಮಾಡಲಾಗಿತ್ತು. ಆದರೆ ಮನೆಯಲ್ಲಿ ಆಗಿದ್ದೇ ಬೇರೆ. ಮಹರಾಜ ಮತ್ತು ಮಹಾರಾಣಿಯರೇ ಪರಸ್ಪರ ಕಿತ್ತಾಡಿಕೊಂಡರು. ಗೌತಮಿ ಸೇರಿದಂತೆ ಕೆಲವು ಸದಸ್ಯರು ಬಿಗ್ಬಾಸ್ ಆದೇಶವನ್ನು ಪಾಲಿಸಿಲ್ಲ. ಇದು ಕಿಚ್ಚನ ಕೋಪಕ್ಕೆ ಕಾರಣವಾಗಿದ್ದು, ಇವುಗಳನ್ನು ಪ್ರಶ್ನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos